ಮಣಿಪುರದ ಚುರಾಚಂದಪುರ್ ತಲುಪಿ ಸಂತ್ರಸ್ತರ ಅಳಲು ಆಲಿಸಿದ ರಾಹುಲ್ ಗಾಂಧಿ
Update: 2023-06-29 18:33 IST
ಫೋಟೋ- Twitter @INCIndia
ಇಂಫಾಲ್: ಚುರಾಚಂದಪುರ್ ಪ್ರದೇಶದಲ್ಲಿ ಭಾರಿ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ರಾಹುಲ್ ಗಾಂಧಿಯವರ ಬೆಂಗಾವಲು ಪಡೆಯನ್ನು ಪೊಲೀಸರು ಬಿಷ್ಣುಪುರದಲ್ಲಿ ಗುರುವಾರ ಮಧ್ಯಾಹ್ನ ತಡೆದಿದ್ದರಿಂದ ಹೆಲಿಕಾಪ್ಟರ್ ಮೂಲಕ ಚುರಾಚಂದಪುರ್‌ಗೆ ರಾಹುಲ್ ಗಾಂಧಿ ಪ್ರಯಾಣಿಸಿದರು.
ಕಳೆದ ಹಲವು ವಾರಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತೀವ್ರವಾಗಿ ಬಾಧಿತವಾಗಿರುವ ಚುರಾಚಂದಪುರ್ ಪ್ರದೇಶಕ್ಕೆ ತಲುಪಿದ ರಾಹುಲ್ ಗಾಂಧಿ, ನಿರಾಶ್ರಿತ ಶಿಬಿರಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು ಹಾಗೂ ಸಂತ್ರಸ್ತ ನಾಗರಿಕರೊಂದಿಗೆ ಮಾತುಕತೆ ನಡೆಸಿದರು ಎಂದು The Indian Express ವರದಿ ಮಾಡಿದೆ.