×
Ad

ಲಡಾಖ್‌ ಭೇಟಿಯ ವೇಳೆ ಪಂಗೊಂಗ್‌ ಲೇಕ್‌ ಪ್ರದೇಶಕ್ಕೆ ಬೈಕ್‌ ಸವಾರಿ ಹೊರಟ ರಾಹುಲ್‌ ಗಾಂಧಿ

Update: 2023-08-19 16:45 IST

Photo: Twitter/@INCIndia 

ಹೊಸದಿಲ್ಲಿ: ಲಡಾಖ್‌ ಭೇಟಿಯಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ ಪಂಗೊಂಗ್‌ ಲೇಕ್‌ ಪ್ರದೇಶಕ್ಕೆ ಬೈಕ್‌ ಸವಾರಿ ನಡೆಸಿದ್ದಾರೆ. ರಾಹುಲ್‌ ಬೈಕ್‌ ಸವಾರಿಯ ವೀಡಿಯೋವನ್ನು ಕಾಂಗ್ರೆಸ್‌ ಪಕ್ಷ ತನ್ನ ‘ಎಕ್ಸ್‌’ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಕೆಲ ಚಿತ್ರಗಳನ್ನು ರಾಹುಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

“ಜಗತ್ತಿನ ಅತ್ಯಂತ ಸುಂದರ ಸ್ಥಳಗಳಲ್ಲೊಂದು ಎಂದು ನನ್ನ ತಂದೆ ಹೇಳುತ್ತಿದ್ದ ಪಂಗೊಂಗ್‌ ಲೇಕ್‌ನತ್ತ ನಾವು ಸಾಗುತ್ತಿದ್ದೇವೆ,”ಎಂದು ರಾಹುಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ತಂದೆ ರಾಜೀವ್‌ ಗಾಂಧಿ ಅವರ ಜನ್ಮದಿನಾಚರಣೆಯ ಸಂದರ್ಭ ಆಗಸ್ಟ್‌ 20ರಂದು ರಾಹುಲ್‌ ಪಂಗೊಂಗ್‌ ಲೇಕ್‌ನಲ್ಲಿ ಪೂಜೆ ಸಲ್ಲಿಸಲಿದ್ದಾರೆ.

ಶುಕ್ರವಾರ ರಾಹುಲ್‌ ಅವರು ಲಡಾಖ್‌ನಲ್ಲಿ ಯುವ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಂವಹನ ನಡೆಸಿದ್ದಾರೆ.

ನಂತರ ಅವರು ಜಿಲ್ಲೆಯಲ್ಲಿ ಫುಟ್ಬಾಲ್‌ ಪಂದ್ಯವೊಂದರಲ್ಲೂ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News