×
Ad

ಖರ್ಗೆಯವರ ಮೊಮ್ಮಗಳಿಗೆ ಹುಟ್ಟುಹಬ್ಬದಂದು ರಾಹುಲ್ ಗಾಂಧಿಯಿಂದ ಅಚ್ಚರಿ ಕೊಡುಗೆ!

Update: 2025-09-09 15:11 IST

Screengrab: Instagram/@bharatjodo

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೊಮ್ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ನಾಯಿಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖರ್ಗೆ ಅವರ ನಿವಾಸದಲ್ಲಿ ಚಿತ್ರೀಕರಿಸಲಾದ ಈ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರು ನಾಯಿಮರಿಯನ್ನು ಉಡುಗೊರೆ ಪೆಟ್ಟಿಗೆಯೊಳಗಿಟ್ಟು, ಖರ್ಗೆ ಕುಟುಂಬಕ್ಕೆ ಅಚ್ಚರಿ ನೀಡುವ ದೃಶ್ಯ ಸೆರೆಹಿಡಿಯಲಾಗಿದೆ. ಬಳಿಕ ಗಾಂಧಿಯವರು ನಿಧಾನವಾಗಿ ನಾಯಿಮರಿಯನ್ನು ಪರಿಚಯಿಸುವುದು, ಮಕ್ಕಳು ಆ ಪುಟ್ಟ ಸಂಗಾತಿಯೊಂದಿಗೆ ಆಟವಾಡುವ ದೃಶ್ಯಗಳು ನೋಡುಗರ ಮನಗೆದ್ದಿವೆ.

ಕಾಂಗ್ರೆಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೊ ಹಂಚಿಕೊಂಡು, “ದೊಡ್ಡ ಪ್ರೀತಿ ಸಣ್ಣ ಪ್ಯಾಕೇಜ್‌ಗಳಲ್ಲಿ ಬರುತ್ತದೆ. ಖರ್ಗೆಯವರ ಮೊಮ್ಮಗಳಿಗೆ ನೆನಪಿಡುವಂತಹ ಹುಟ್ಟುಹಬ್ಬದ ಉಡುಗೊರೆ", ಎಂದು ಬರೆದಿದೆ .

ಸೋಮವಾರ ಬಿಡುಗಡೆಯಾದ ಈ ವೀಡಿಯೊ ತಕ್ಷಣವೇ ವೈರಲ್ ಆಗಿ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮೆಚ್ಚುಗೆ ಗಳಿಸಿತು. ನಾಯಿಮರಿಯನ್ನು ದತ್ತು ತೆಗೆದುಕೊಂಡ ರಾಹುಲ್ ಗಾಂಧಿಯವರನ್ನು ಶ್ಲಾಘಿಸುತ್ತಾ, ಕೆಲವರು ಅವರನ್ನು ಈ ರೀತಿಯ ಹೃದಯಸ್ಪರ್ಶಿ ನಡೆಗಳಿಗಾಗಿ ಮುಂದಿನ ಪ್ರಧಾನಿ ಎಂದು ಪರಿಗಣಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವೀಡಿಯೊಗೆ ಟೀಕೆಯೂ ಬಂದಿದೆ. ಉಡುಗೊರೆ ಪೆಟ್ಟಿಗೆಯಲ್ಲಿ ಗಾಳಿ ಹರಿದಾಡಲು ಕೊರತೆಯಿರುವುದು ಕಂಡುಬರುತ್ತಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿ, ಜೀವಂತ ಪ್ರಾಣಿಯನ್ನು ಪ್ಯಾಕೇಜ್‌ನಲ್ಲಿ ಇಡುವುದು ಪ್ರಾಣಿಹಿತಾಸಕ್ತಿಗೆ ವಿರುದ್ಧ ಎಂದು ಟೀಕಿಸಿದ್ದಾರೆ.

ಇತ್ತೀಚೆಗೆ ಸಪ್ರೀಂ ಕೋರ್ಟ್ ದಿಲ್ಲಿ -ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳ ಕಡಿತ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ, ಅವುಗಳನ್ನು ತೆರವುಗೊಳಿಸುವ ಹಳೆಯ ನಿರ್ದೇಶನವನ್ನು ಪರಿಷ್ಕರಿಸಿರಿಸಿರುವ ಸಂದರ್ಭದಲ್ಲಿಯೇ ರಾಹುಲ್ ಗಾಂಧಿಯವರ ಈ ನಡೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News