×
Ad

ಸಂಸತ್ತಿನಲ್ಲಿ ಜಾತಿ ಜನಗಣತಿ ಕುರಿತು ಮಾತನಾಡುವಾಗ ನಕ್ಕ ವಿತ್ತ ಸಚಿವೆಗೆ ರಾಹುಲ್‌ ಗಾಂಧಿ ತಿರುಗೇಟು

Update: 2024-07-29 18:33 IST

 ರಾಹುಲ್ ಗಾಂಧಿ , ನಿರ್ಮಲಾ ಸೀತಾರಾಮನ್ | PC : X \ @RahulGandhi

ಹೊಸದಿಲ್ಲಿ: ತಾನು ಜಾತಿ ಜನಗಣತಿ ಕುರಿತಾಗಿ ಮಾತನಾಡುವಾಗ ಮುಖ ಮುಚ್ಚಿಕೊಂಡು ನಕ್ಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಿಗೆ ರಾಹುಲ್ ಗಾಂಧಿ ಎಕ್ಸ್ ನಲ್ಲಿ ತಿರುಗೇಟು ನೀಡಿದ್ದಾರೆ. ಗಂಭೀರ ವಿಷಯವನ್ನು ಸಚಿವೆ ಲೇವಡಿ ಮಾಡಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.

ಇಂದು ಸಂಸತ್ತಿನಲ್ಲಿ ನಾನು ಜಾತಿ ಗಣತಿ ವಿಷಯವನ್ನು ಪ್ರಸ್ತಾಪಿಸಿದಾಗ ವಿತ್ತ ಸಚಿವರು ನಗುತ್ತಾ ಈ ಗಂಭೀರ ವಿಷಯವನ್ನು ಅಪಹಾಸ್ಯ ಮಾಡಿದರು. ದೇಶದ ಶೇ.90ರಷ್ಟು ಜನರ ಜೀವನಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಚಾರಕ್ಕೆ ಇಂತಹ ನಿರ್ಲಕ್ಷ್ಯದ ಪ್ರತಿಕ್ರಿಯೆ ಬಿಜೆಪಿಯ ಉದ್ದೇಶ ಹಾಗೂ ಮನಸ್ಥಿತಿಯನ್ನು ಬಯಲು ಮಾಡಿದೆ ಎಂದು ಹೇಳಿದ್ದಾರೆ.

ನಾವು ಯಾವುದೇ ಬೆಲೆ ತೆತ್ತಾದರೂ ಜಾತಿ ಗಣತಿಯನ್ನು ಕಾರ್ಯರೂಪಕ್ಕೆ ತಂದು ವಂಚಿತರಿಗೆ ನ್ಯಾಯ ಒದಗಿಸುತ್ತೇವೆ ಎಂದು ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆ. ದೇಶದ ಎಕ್ಸ್-ರೇ ಅನ್ನು ಇಂಡಿಯಾ ಎಲ್ಲರೆದುರು ತರುತ್ತದೆ ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News