×
Ad

ಮುಂಬೈ ನಿಲ್ದಾಣದಲ್ಲಿ ರೈಲಿಗೆ ಸಿಲುಕಿಕೊಂಡ ಮಹಿಳೆಯನ್ನು ರಕ್ಷಿಸಿದ ರೈಲ್ವೆ ಪೊಲೀಸ್: ವಿಡಿಯೊ ವೈರಲ್

Update: 2025-03-09 14:47 IST

Screengrab:X/@RailMinIndia

ಮುಂಬೈ: ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ರೈಲಿಗೆ ಸಿಲುಕಿಕೊಂಡ ಮಹಿಳೆಯೊಬ್ಬರನ್ನು ರೈಲ್ವೆ ರಕ್ಷಣಾ ಸಿಬ್ಬಂದಿಯೊಬ್ಬರು ರಕ್ಷಿಸಿರುವ ಘಟನೆಯ ವಿಡಿಯೊ ವೈರಲ್ ಆಗಿದೆ.

ರವಿವಾರ ರೈಲ್ವೆ ಸಚಿವಾಲಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊ ದೃಶ್ಯಾವಳಿಯಲ್ಲಿ, ಮುಂಬೈನ ಬೊರಿವಿಲಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ  ಕಾಲುಜಾರಿ ರೈಲು ಹಾಗೂ ಫ್ಲಾಟ್‌ಪಾರಂ ನಡುವೆ ಸಿಲುಕಿಕೊಂಡಿದ್ದಾರೆ.

ತಕ್ಷಣವೆ ರೈಲು ನಿಲ್ದಾಣದಲ್ಲಿದ್ದ ರೈಲ್ವೆ ಭದ್ರತಾ ಸಿಬ್ಬಂದಿಯೊಬ್ಬರು ಮಹಿಳೆಯ ನೆರವಿಗೆ ಧಾವಿಸಿದ್ದು, ಆಕೆಯನ್ನು ರೈಲಿನಿಂದ ಹೊರಗೆಳೆಯುವಲ್ಲಿ ಸಫಲರಾಗಿದ್ದಾರೆ.

ಘಟನೆಯ ವಿಡಿಯೋ ಹಂಚಿಕೊಂಡಿರುವ ರೈಲ್ವೆ ಸಚಿವಾಲಯ, “ದಯವಿಟ್ಟು ಚಲಿಸುತ್ತಿರುವ ರೈಲಿನಿಂದ ಕೆಳಗಿಳಿಯಲು ಯತ್ನಿಸಬಾರದು” ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದೆ.

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ರೈಲ್ವೆ ರಕ್ಷಣಾ ಸಿಬ್ಬಂದಿಯ ಪ್ರಯತ್ನವನ್ನು ಶ್ಲಾಘಿಸಿದ್ದು, ಅವರಿಗೆ ಸೂಕ್ತ ಬಹುಮಾನ ನೀಡಬೇಕು ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಕ್ಸ್ ಬಳಕೆದಾರರೊಬ್ಬರು, “ಪ್ರಯಾಣಿಕರಿಗೆ ತಮ್ಮ ಕ್ಷಿಪ್ರ ಕ್ರಮದ ಮೂಲಕ ನೆರವು ನೀಡುವ ಇಂತಹ ಜಾಗೃತ ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಗಳಿಗೆ ಸೂಕ್ತ ಬಹುಮಾನ ನೀಡಬೇಕು. ಇದರಿಂದ ಅವರ ನೈತಿಕ ಶಕ್ತಿ ಮತ್ತಷ್ಟು ಹೆಚ್ಚಲಿದ್ದು, ಇತರರಿಗೆ ಸ್ಫೂರ್ತಿಯೂ ಆಗಲಿದೆ” ಎಂದು ಸಲಹೆ ನೀಡಿದ್ದಾರೆ.

ಮತ್ತೊಬ್ಬ ಬಳಕೆದಾರರು “ಅದ್ಭುತ ಕೆಲಸ” ಎಂದು ಪ್ರಶಂಸಿಸಿದ್ದರೆ, “ಇಂತಹ ಘಟನೆಗಳನ್ನು ತಪ್ಪಿಸಲು ರೈಲ್ವೆ ಇಲಾಖೆಯು ರೈಲುಗಳಲ್ಲಿ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಬೇಕು” ಎಂದು ಇನ್ನೂ ಕೆಲವು ಬಳಕೆದಾರರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News