×
Ad

ರಾಜಸ್ಥಾನ | ಪತ್ನಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ವ್ಯಕ್ತಿಯ ಬಂಧನ

Update: 2024-08-13 21:24 IST

 Image: Screengrab | X 

ಜೈಪುರ : ತನ್ನ ಪತ್ನಿಯನ್ನು ಬೈಕಿಗೆ ಕಟ್ಟಿ ಗ್ರಾಮದ ತುಂಬೆಲ್ಲ ಎಳೆದೊಯ್ದಿದ್ದ ವ್ಯಕ್ತಿಯನ್ನು ರಾಜಸ್ಥಾನ ಪೋಲಿಸರು ಬಂಧಿಸಿದ್ದಾರೆ.

ಘಟನೆಯು ಒಂದು ತಿಂಗಳ ಹಿಂದೆ ನಾಗೌರ್ ಜಿಲ್ಲೆಯ ನರಸಿಂಗಪುರ ಗ್ರಾಮದಲ್ಲಿ ನಡೆದಿತ್ತು. ಮದ್ಯದ ಅಮಲಿನಲ್ಲಿದ್ದ ಪ್ರೇಮರಾಮ ಮೇಘ್ವಾಲ್(32) ಪತ್ನಿಯನ್ನು ಥಳಿಸಿದ ಬಳಿಕ ಆಕೆಯನ್ನು ಬೈಕಿಗೆ ಕಟ್ಟಿ ಎಳೆದೊಯ್ದಿದ್ದ. ಘಟನೆಯ ವೀಡಿಯೊ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪೋಲಿಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈಗ ತನ್ನ ಸಂಬಂಧಿಗಳ ಜೊತೆಯಲ್ಲಿ ವಾಸವಾಗಿರುವ ಮಹಿಳೆ ಘಟನೆಯ ಕುರಿತು ಪೋಲಿಸ್ ದೂರು ದಾಖಲಿಸಿರಲಿಲ್ಲ.

ಮೇಘ್ವಾಲ್ ಮದ್ಯವ್ಯಸನಿಯಾಗಿದ್ದು, ದಿನವೂ ಪತ್ನಿಯನ್ನು ಥಳಿಸುತ್ತಿದ್ದ. ಆಕೆ ಗ್ರಾಮದಲ್ಲಿಯ ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ ಎಂದು ನೆರೆಕರೆಯವರನ್ನು ಉಲ್ಲೇಖಿಸಿ ಪೋಲಿಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News