×
Ad

ರಾಜಸ್ಥಾನ: ತಂದೆಯಿಂದಲೇ ಮಗಳ ಹತ್ಯೆ

Update: 2023-11-29 10:58 IST

ಜೈಪುರ: ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪುತ್ರಿಯ ಕತ್ತು ಸೀಳಿ, ಆಕೆಗೆ ಬೆಂಕಿ ಹಚ್ಚಿ ಅಮಾನುಷವಾಗಿ ಹತ್ಯೆ ಮಾಡಿರುವ ಪ್ರಕರಣ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ. ತಲೆ ಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಪ್ರಯತ್ನ ನಡೆಯುತ್ತಿದೆ.

ಆರೋಪಿ ಶಿವಲಾಲ್ ಮೇಘ್ವಾಲ್ ಎಂಬಾತ ಕಳೆದ ಹನ್ನೆರಡು ವರ್ಷಗಳಿಂದ ತನ್ನ ಕುಟುಂಬದಿಂದ ಪ್ರತ್ಯೇಕವಾಗಿ ಪಾಲಿಯಲ್ಲಿ ವಾಸವಿದ್ದ. ಆತನ ಪತ್ನಿ ಹಾಗೂ ಮಕ್ಕಳು ಗುಜರಾತ್ ನಲ್ಲಿ ವಾಸವಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ತಮ್ಮ ಕೌಟುಂಬಿಕ ವೈಮನಸ್ಯಕ್ಕೆ ಹಿರಿಯ ಮಗಳು ನಿರ್ಮಾ (32) ಕಾರಣ ಎಂಬ ಸಂಶಯದಿಂದ ಮೇಘ್ವಾಲ್ ಈ ಕೃತ್ಯ ಎಸಗಿದ್ದಾನೆ ಎಂದು  ಸಂಬಂಧಿಕರು ದೂರಿದ್ದಾರೆ.

ನಿರ್ಮಾ ಸೋಮವಾರ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಪಾಲಿ ಜಿಲ್ಲೆಯ ಇಸಲಿ ಗ್ರಾಮಕ್ಕೆ ಬಂದಿದ್ದು, ತಂದೆಯನ್ನು ಭೇಟಿ ಮಾಡಿದ್ದರು. ಆತ ತನ್ನ ಜತೆ ಬರುವಂತೆ ಆಕೆಯನ್ನು ಹಾಗೂ ಆಕೆಯ ತಂಗಿಯನ್ನು ಆಹ್ವಾನಿಸಿದ್ದಾನೆ.

ಬಳಿಕ ಕಿರಿ ಮಗಳನ್ನು ಒಂದು ಕಡೆ ನಿಲ್ಲುವಂತೆ ಹೇಳಿ ನಿರ್ಮಾಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಸೀಳಿ, ಪೆಟ್ರೋಲ್ ಸಿಂಪಡಿಸಿ ಬೆಂಕಿ ಹಚ್ಚಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಮೇಘ್ವಾಲ್ ವಾಪಾಸು ಬಂದಾಗ ಕಿರಿಯ ಮಗಳು ಆತನ ಕೈಯಲ್ಲಿ ರಕ್ತವನ್ನು ಕಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಿರ್ಮಾ ಅವರ ಅರೆ ಬೆಂದ ದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News