×
Ad

‘ಇಂದಿರಾ ರಸೋಯಿ ಯೋಜನೆʼಯ ಹೆಸರು ಬದಲಾಯಿಸಿದ ರಾಜಸ್ಥಾನದ ಬಿಜೆಪಿ ಸರಕಾರ

Update: 2024-01-07 16:08 IST
File Photo: ANI

ಜೈಪುರ: ಮುಖ್ಯಮಂತ್ರಿ ಭಜನಲಾಲ ಶರ್ಮಾ ನೇತೃತ್ವದ ರಾಜಸ್ಥಾನದ ಬಿಜೆಪಿ ಸರಕಾರವು ‘ಇಂದಿರಾ ರಸೋಯಿ ಯೋಜನೆ’ಗೆ ಶನಿವಾರ ‘ಶ್ರೀಅನ್ನಪೂರ್ಣ ರಸೋಯಿ ಯೋಜನೆ ’ಎಂದು ಮರುನಾಮಕರಣ ಮಾಡಿದೆ.

ಹಿಂದಿನ ಅಶೋಕ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರವು ಬಡವರಿಗೆ ಮತ್ತು ಅಗತ್ಯವುಳ್ಳವರಿಗೆ ಸಬ್ಸಿಡಿ ದರಗಳಲ್ಲಿ ಪೌಷ್ಟಿಕ ಊಟವನ್ನು ಒದಗಿಸಲು ಇಂದಿರಾ ರಸೋಯಿ ಯೋಜನೆಯನ್ನು 2020ರಲ್ಲಿ ಆರಂಭಿಸಿತ್ತು.

ಶ್ರೀಅನ್ನಪೂರ್ಣ ರಸೋಯಿ ಯೋಜನೆಯಡಿ ಈಗ ಊಟದ ತೂಕವನ್ನು 600 ಗ್ರಾಮ್‌ಗಳಿಗೆ ಮತ್ತು ಪ್ರತಿ ಊಟಕ್ಕೆ ಸರಕಾರಿ ಅನುದಾನವನ್ನು 17 ರೂ.ಗಳಿಂದ 22 ರೂ.ಗಳಿಗೆ ಹೆಚ್ಚಿಸಲಾಗಿದೆ. ಆದರೆ ಪ್ರತಿ ಪ್ಲೇಟ್ ಊಟಕ್ಕೆ ಗ್ರಾಹಕರಿಗೆ ವಿಧಿಸಲಾಗುವ ಎಂಟು ರೂ.ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ಎಲ್ಲ ಹೋರ್ಡಿಂಗ್‌ಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳಲ್ಲಿ ಯೋಜನೆಯ ಹೆಸರನ್ನು ಬದಲಿಸಲೂ ಸರಕಾರವು ಆದೇಶಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News