×
Ad

ರಾಜಸ್ಥಾನ: ಗಣಿಯಲ್ಲಿ ಲಿಫ್ಟ್ ಕುಸಿತ:‌ 14 ಅಧಿಕಾರಿಗಳ ರಕ್ಷಣೆ, ಓರ್ವ ಮೃತ್ಯು

Update: 2024-05-15 14:42 IST

PC : PTI 

ಜೈಪುರ: ನಿನ್ನೆ ರಾತ್ರಿಯಿಂದ ನೀಮ್ ಕಾ ಥಾಣಾ ಜಿಲ್ಲೆಯ ಗಣಿಯೊಂದರಲ್ಲಿ ಲಿಪ್ಟ್‌ ಕುಸಿತಗೊಂಡು ಗಣಿಯೊಳಗೆ ಸಿಲುಕಿಕೊಂಡಿದ್ದ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ನ 15 ಮಂದಿ ಅಧಿಕಾರಿಗಳ ಪೈಕಿ 14 ಮಂದಿಯನ್ನು ರಕ್ಷಿಸಲಾಗಿದ್ದು, ಓರ್ವ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ನೀಮ್ ಕಾ ಥಾಣಾದ ಜಿಲ್ಲಾಧಿಕಾರಿ ಶರದ್ ಮೆಹ್ರಾ, ರಕ್ಷಿಸಲಾಗಿರುವ 14 ಮಂದಿಯನ್ನು ಚಿಕಿತ್ಸೆಗಾಗಿ ಜೈಪುರದಲ್ಲಿನ ಎಸ್ಎಂಎಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ಲಿಫ್ಟ್ ನ ಹಗ್ಗವು ತುಂಡರಿಸಿ, ಲಿಫ್ಟ್ ಕುಸಿತಗೊಂಡಿದೆ, ಮಂಗಳವಾರ ರಾತ್ರಿಯಿಂದ ಸಾರ್ವಜನಿಕ ಉದ್ಯಮದ 15 ಮಂದಿ ಸಿಬ್ಬಂದಿಗಳು ಗಣಿಯೊಳಗೆ ಸಿಲುಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಕ್ಷಣಾ ವಿಭಾಗದ ಸದಸ್ಯರು ಹಾಗೂ ಇತರ ಅಧಿಕಾರಿಗಳನ್ನು ಒಳಗೊಂಡ ತಂಡವು ಪರಿಶೀಲನೆಗೆಂದು ಗಣಿಗೆ ಇಳಿದಿತ್ತು. ಅವರು ಮೇಲೆ ಬರುವಾಗ ಲಿಫ್ಟ್ ನ ಹಗ್ಗ ತುಂಡರಿಸಿದ್ದರಿಂದ, ಲಿಫ್ಟ್ ಕುಸಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News