×
Ad

ರಾಜ್ಯಸಭೆ ಚುನಾವಣೆ : ಉತ್ತರ ಪ್ರದೇಶದಿಂದ ಬಿಜೆಪಿಯ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

Update: 2024-02-14 21:27 IST

Photo: ANI 

ಲಕ್ನೊ: ಮುಂಬರುವ ರಾಜ್ಯ ಸಭಾ ಚುನಾವಣೆಗೆ ಬಿಜೆಪಿಯ 7 ಮಂದಿ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿದವರಲ್ಲಿ ಕೇಂದ್ರದ ಮಾಜಿ ಸಚಿವ ಆರ್.ಪಿ.ಎನ್. ಸಿಂಗ್, ಮಾಜಿ ಸಂಸದ ಚೌಧರಿ ತೇಜ್ವೀರ್ ಸಿಂಗ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರ್ಪಾಲ್ ಮೌರ್ಯ, ಮಾಜಿ ಸಹಾಯಕ ಸಚಿವೆ ಸಂಗೀತಾ ಬಲ್ವಂತ್, ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, ಮಾಜಿ ಶಾಸಕಿ ಸಾದ್ನಾ ಸಿಂಗ್ ಹಾಗೂ ಆಗ್ರಾದ ಮಾಜಿ ಮೇಯರ್ ನವೀನ್ ಜೈನ್ ಸೇರಿದ್ದಾರೆ.

ಈ ಸಂದರ್ಭ ಮುಖ್ಯಮಂತ್ರಿ ಆದಿತ್ಯನಾಥ್ ಅವರಲ್ಲದೆ ಬಿಜೆಪಿಯ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಿಜೇಶ್ ಪಾಠಕ್ ಹಾಗೂ ಬಿಜೆಪಿಯ ಉತ್ತರಪ್ರದೇಶದ ಲೋಕಸಭಾ ಉಸ್ತುವಾರಿ ಬೈಜಯಂತ್ ಪಾಂಡಾ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News