×
Ad

ಅಯೋಧ್ಯೆಯಲ್ಲಿ ಮುಸ್ಲಿಮರ ರಾಮಲೀಲಾ; ಏನಿದರ ವಿಶೇಷತೆ?

Update: 2024-10-11 10:43 IST

PC: TOI

ಅಯೋಧ್ಯೆ: ಉತ್ತರ ಪ್ರದೇಶದ ಆರೋಗ್ಯ ಇಲಾಖೆಯಲ್ಲಿ ವೈದ್ಯರಾಗಿ ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕರಿಸುತ್ತಿರುವ ಸೈಯ್ಯದ್ ಮಜೀದ್, ದಸರಾ ಬಂತೆಂದರೆ ಪ್ರತಿ ವರ್ಷ ಆರು ವಾರಗಳ ಕಾಲ ರಾಮಲೀಲಾ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಮುಮ್ತಾಜ್ ನಗರ ರಾಮಲೀಲಾ ರಾಮಾಯಣ ಸಮಿತಿಯ ವತಿಯಿಂದ ಏಳು ದಿನಗಳ ರಾಮಲೀಲಾ ಕಾರ್ಯಕ್ರಮ ನಡೆಯುತ್ತದೆ. ಇದರ ವ್ಯವಸ್ಥಾಪಕರಾಗಿರುವ ಮಜೀದ್ ಅವರು ಇಡೀ ಕಾರ್ಯಕ್ರಮ ವ್ಯವಸ್ಥೆಯಲ್ಲಿ ಪ್ರಮುಖ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾರೆ.

"ಕೋಮು ಸಾಮರಸ್ಯವನ್ನು ಪ್ರೇರೇಪಿಸಲು ಮತ್ತು ಭ್ರಾತೃತ್ವವನ್ನುRamlila of Muslims in Ayodhya; What's so special?Ramlila of Muslims in Ayodhya; What's so special?Ramlila of Muslims in Ayodhya; What's so special? ಬಲಪಡಿಸಲು ನನ್ನ ತಂದೆ 1963ರಲ್ಲಿ ರಾಮಲೀಲಾವನ್ನು ಆರಂಭಿಸಿದರು. ಇದು ನಿರೀಕ್ಷೆಯನ್ನು ಮೂಡಿಸುವ ಕಥಾನಕ. ಈ ಸಂಪ್ರದಾಯವನ್ನು ಮುಂದುವರಿಸಲು ನನಗೆ ಸಂತೋಷವಾಗುತ್ತಿದೆ" ಎಂದು ಮಜೀದ್ ಹೇಳುತ್ತಾರೆ. ಈ ತಂಡದಲ್ಲಿ ಕನಿಷ್ಠ 10 ಮಂದಿ ಮುಸ್ಲಿಮರಿದ್ದಾರೆ. ಪ್ರೇಕ್ಷಕರಂತೂ ಬಹುತೇಕ ಮುಸ್ಲಿಮರು ಎಂದು ಹೇಳಲಾಗುತ್ತಿದೆ.

"ಎರಡೂ ಕಡೆಗಳ ಧಾರ್ಮಿಕ ಭಾವನೆಗಳ ಬಗ್ಗೆ ಸಮಿತಿಗೆ ಅರಿವು ಇದೆ. ಪ್ರಮುಖ ಪಾತ್ರವನ್ನು ಹಿಂದೂಗಳು ನಿರ್ವಹಿಸುತ್ತಾರೆ. ಮುಸ್ಲಿಮರು ಇತರ ಪಾತ್ರಗಳನ್ನು ನಿರ್ವಹಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಆದ್ದರಿಂದ ಮುಸ್ಲಿಮರು ಪ್ರಮುಖ ಪಾತ್ರವನ್ನು ನಿರ್ವಹಿಸುವುದಿಲ್ಲ ಎಂದು ಮಜೀದ್ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News