×
Ad

ಅತ್ಯಾಚಾರ ಆರೋಪಿಗೆ ಥಳಿಸಿ ಎತ್ತಿನಗಾಡಿಗೆ ಕಟ್ಟ ಬೆತ್ತಲೆ ಮೆರವಣಿಗೆ

Update: 2025-04-18 21:15 IST

ಸಾಂದರ್ಭಿಕ ಚಿತ್ರ

ಲಕ್ನೋ: ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನನ್ನು ಸ್ಥಳೀಯರು ಥಳಿಸಿದ ಬಳಿಕ ಆತನನ್ನು ಎತ್ತಿನ ಗಾಡಿಗೆ ಕಟ್ಟಿಹಾಕಿ ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ಉತ್ತರಪ್ರದೇಶದ ಬಹರಾಯಿಚ್ ಜಿಲ್ಲೆಯ ವಿಶ್ವೇಶ್ವರಗಂಜ್‌ನಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

22 ವರ್ಷದ ವ್ಯಕ್ತಿಯ ದೇಹದ ಕೆಳಭಾಗವನ್ನು ವಿವಸ್ತ್ರಗೊಳಿಸಿ ಆತನನ್ನು ಎತ್ತಿಗಾಡಿಗೆ ಕಟ್ಟಿ ಹಾಕಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಹಲವರು ಪುರುಷರು ಹಾಗೂ ಮಹಿಳೆಯರು ಜಮಾಯಿಸಿದ್ದು, ಆತನಿಗೆ ಕಚ್ಚುವಂತೆ ನಾಯಿಯೊಂದನ್ನು ಕೆಲವರು ಪ್ರಚೋದಿಸುತ್ತಿರುವುದು ಹಾಗೂ ಆತನನ್ನು ಥಳಿಸುವುದನ್ನು ಉತ್ತೇಜಿಸುವುದು ಕೂಡಾ ವೀಡಿಯೊದಲ್ಲಿ ಕಂಡುಬಂದಿದೆ. ‘‘ಆತನಿಗೆ ಹಾಗೆ ಆಗಬೇಕು. ಆತ ಸತ್ತರೂ ದೊಡ್ಡ ವಿಷಯವೇನಲ್ಲ ಎಂದು ಕೆಲವರು ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಸಿದೆ.

ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಆತನ ಕುಟುಂಬಿಕರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಗುರುತಿಸಿರದ ವ್ಯಕ್ತಿಗಳ ಮೇಲೆ ಭಾರತೀಯ ನ್ಯಾಯಸಂಹಿತೆಯ ಅಡಿಯ ಹಲ್ಲೆ ಹಾಗೂ ಹಾನಿಯುಂಟು ಮಾಡಿದ ಆರೋಪಗಳನ್ನು ದಾಖಲಿಸಲಾಗಿದೆ.

ವಿಶ್ವೇಶ್ವರಗಂಜ್‌ ನ ಠಾಣಾಧಿಕಾರಿ ಗ್ಯಾನ್‌ಸಿಂಗ್ ಅವರು ಹೇಳಿಕೆಯೊಂದನ್ನು ನೀಡಿ, ಈ ಎರಡು ವಿಭಿನ್ನ ಸಮುದಾಯಗಳ ವ್ಯಕ್ತಿಗಳು ಘಟನೆಯಲ್ಲಿ ಶಾಮೀಲಾಗಿದ್ದಾರಾದರೂ, ಯಾವುದೇ ಕೋಮು ಉದ್ವಿಗ್ನತೆ ಸೃಷ್ಟಿಯಾಗಿಲ್ಲ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆಯೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News