×
Ad

ಅಮೆರಿಕದ ತಮ್ಮದೇ ಹೋಟೆಲ್ ನಲ್ಲಿ ಗುರುತು ಬಹಿರಂಗಪಡಿಸದೆ ಉಪಾಹಾರ ಸೇವಿಸಿದ್ದ ರತನ್ ಟಾಟಾ : ಐಟಿ ಸಂಸ್ಥೆಯ ಮುಖ್ಯಸ್ಥ

Update: 2024-10-10 18:50 IST

ರತನ್ ಟಾಟಾ | PC : PTI 

ತಿರುವನಂತಪುರಂ : ಖ್ಯಾತ ಭಾರತೀಯ ಉದ್ಯಮಿ, ಟಾಟಾ ಸನ್ಸ್ ಸಮೂಹ ಸಂಸ್ಥೆಯ ಗೌರವಾಧ್ಯಕ್ಷ ರತನ್ ಟಾಟಾರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಐಬಿಎಸ್ ಸಾಫ್ಟ್ ವೇರ್ ನ ಕಾರ್ಯಕಾರಿ ಅಧ್ಯಕ್ಷ ವಿ.ಕೆ.ಮ್ಯಾಥ್ಯೂಸ್, ರತನ್ ಟಾಟಾರೊಂದಿಗೆ ಕಳೆದ ಎರಡು ಸಂದರ್ಭಗಳನ್ನು ಸ್ಮರಿಸಿದ್ದಾರೆ.

“ಒಂದು ಬೆಳಗ್ಗೆ ನಾವು ನ್ಯೂಯಾರ್ಕ್ ನಲ್ಲಿರುವ ರತನ್ ಟಾಟಾರ ಸ್ವಂತ ಹೋಟೆಲ್ ಒಂದರಲ್ಲಿ ಉಪಾಹಾರಕ್ಕೆ ತೆರಳಿದ್ದೆವು. ಆದರೆ, ಅವರ ಸೂಚನೆಯ ಮೇರೆಗೆ ಅವರ ಗುರುತನ್ನು ಸೇವಾ ಸಿಬ್ಬಂದಿಗಳಿಗೆ ಬಹಿರಂಗಪಡಿಸಿರಲಿಲ್ಲ. ಇದು ತೀರಾ ಸಣ್ಣ ಸಂಗತಿಯಾದರೂ, ಅವರ ಮಾನವೀಯ ವ್ಯಕ್ತಿತ್ವವನ್ನು ತೋರಿಸುತ್ತದೆ” ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

“ಅದೇ ದಿನ ಸ್ವಲ್ಪ ಹೊತ್ತಿನ ನಂತರ, ನಾನು ನನ್ನ ಕುಟುಂಬದೊಂದಿಗೆ ಅವರ ಜೊತೆ ಮತ್ತೊಂದು ರೆಸ್ಟೋರೆಂಟ್ ಗೆ ತೆರಳಬೇಕಾಯಿತು. ಆದರೆ, ನನಗೆ ಅಚ್ಚರಿಯಾಗುವಂತೆ ಅವರು ತಮ್ಮ ಆಹಾರದ ಬಿಲ್ ಅನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಅದನ್ನು ಸರಿಪಡಿಸುವ ಮೂಲಕ ಕ್ರೆಡಿಟ್ ಕಾರ್ಡ್ ಮುಖಾಂತರ ತಮ್ಮ ಬಿಲ್ ಅನ್ನು ಪಾವತಿಸಿದ್ದರು. ಇದು ಅವರ ಸರಳತೆಯಾಗಿದ್ದರೂ, ಅವರ ವ್ಯಕ್ತಿತ್ವದ ತೂಕವನ್ನು ಹೇಳುತ್ತದೆ” ಎಂದು ಅವರು ಹೇಳಿದ್ದಾರೆ.

“ನನ್ನ ಪಾಲಿಗೆ ಅತ್ಯಂತ ಮಹತ್ವದ ಸಂಗತಿಯೆಂದರೆ, ಅವರ ನಮ್ರತೆ. ಇದರೊಂದಿಗೆ ಅವರ ಹಾಸ್ಯ ಪ್ರಜ್ಞೆ. ಗಂಭೀರ ಕ್ಷಣಗಳ ನಡುವೆಯೂ ತಮ್ಮ ಹಾಸ್ಯ ಪ್ರಜ್ಞೆಯಿಂದ ಆ ಕ್ಷಣವನ್ನು ಮತ್ತಷ್ಟು ಆಪ್ತವಾಗಿಸುತ್ತಿದ್ದರು” ಎಂದು ಮ್ಯಾಥ್ಯೂಸ್ ಸ್ಮರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News