×
Ad

ರೆಪೋ ದರ ಶೇ.6ಕ್ಕೆ ಇಳಿಕೆ ಮಾಡಿದ ಆರ್‌ಬಿಐ; ಗೃಹ, ವಾಹನ ಸಾಲಗಾರರಿಗೆ ʼಗುಡ್ ನ್ಯೂಸ್ʼ!

Update: 2025-04-09 12:24 IST

ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (PTI) 

ಹೊಸದಿಲ್ಲಿ : RBI ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್ಸ್‌ ಕಡಿತಗೊಳಿಸಿದ್ದು, ರೆಪೋ ದರ ಶೇ.6ಕ್ಕೆ ಇಳಿಕೆಯಾಗಿದೆ. ಇದರಿಂದ ಗೃಹ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿದರ ಮತ್ತು ಇಎಂಐ ಕಡಿತವಾಗಲಿದೆ ಎಂದು ಹೇಳಲಾಗಿದೆ.

ವಿತ್ತೀಯ ನೀತಿ ಸಮಿತಿ ಸಭೆಯ ಬಳಿಕ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರೆಪೋದರವನ್ನು 25 ಮೂಲಾಂಕಗಳಷ್ಟು ಇಳಿಸುವ ನಿರ್ಧಾರವನ್ನು ಪ್ರಕಟಿಸಿದರು.

25 ಬೇಸಿಸ್ ಪಾಯಿಂಟ್ಸ್‌ ಕಡಿತದೊಂದಿಗೆ, ರೆಪೋ ದರ ಈಗ 6% ರಷ್ಟಿದೆ. 6.25ರಷ್ಟಿದ್ದ ರೆಪೋ ದರದಲ್ಲಿ ಶೇ.25 ಬೇಸಿಸ್ ಪಾಯಿಂಟ್ಸ್‌ ಇಳಿಕೆ ಮಾಡಲು ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಂಡಿರುವುದಾಗಿ ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದರು.

ಸಂಜಯ್ ಮಲ್ಹೋತ್ರಾ ಅವರು ಆರ್‌ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸುವ ವೇಳೆ ರೆಪೋ ದರ ಶೇ.6.50ರಷ್ಟಿತ್ತು. ಮೊದಲ ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ಶೇ.25 ಬೇಸಿಸ್ ಪಾಯಿಂಟ್ಸ್ ಇಳಿಕೆ ಮಾಡುವ ನಿರ್ಧಾರ ಕೈಗೊಂಡಿತ್ತು. ಇದೀಗ ಮತ್ತೆ 25 ಬೇಸಿಸ್‌ ಪಾಯಿಂಟ್ಸ್‌ ಇಳಿಕೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News