×
Ad

ನಾಗಾಲ್ಯಾಂಡ್ ಮೂಲದ ಪತ್ರಕರ್ತನ ಮೇಲೆ ಮಣಿಪುರದಲ್ಲಿ ಗುಂಡಿನ ದಾಳಿ

ಸಾರ್ವಜನಿಕ ಸಭೆಯಲ್ಲಿ ಪತ್ರಕರ್ತನಿಗೆ ಬೆದರಿಕೆ ಹಾಕಿದ್ದ ನಾಗಾಲ್ಯಾಂಡ್ ಡಿಸಿಎಂ

Update: 2025-08-31 15:44 IST

ದೀಪ್ ಸೈಕಿಯಾ (Photo:X/@afridahussai)

ದಿಮಾಪುರ್: ನಾಗಾಲ್ಯಾಂಡ್ ಉಪಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ವೈ. ಪ್ಯಾಟನ್ ಸಾರ್ವಜನಿಕ ಸಭೆಯಲ್ಲಿ ಬೆದರಿಕೆ ಹಾಕಿದ ಒಂದೇ ವಾರದಲ್ಲಿ ನಾಗಾಲ್ಯಾಂಡ್ ಮೂಲದ ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರ ಮೇಲೆ ಮಣಿಪುರದ ಸೇನಾಪತಿ ಜಿಲ್ಲೆಯ ಲಿಯರ್ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ.

ಬಿಜೆಪಿ ನಾಯಕ ವೈ. ಪ್ಯಾಟನ್ ನಾಗಾಲ್ಯಾಂಡ್ ಮತ್ತು ಮಣಿಪುರದ ನಾಗಾ ಪ್ರದೇಶಗಳಲ್ಲಿ ಪ್ರಾಬಲ್ಯವನ್ನು ಹೊಂದಿದ್ದಾರೆ.

ವರದಿಗಾರ ದೀಪ್ ಸೈಕಿಯಾ ಲಿಯರ್ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಪುಷ್ಪ ಪ್ರದರ್ಶನದ ಚಿತ್ರೀಕರಣ ನಡೆಸುವಾಗ ಈ ಘಟನೆ ನಡೆದಿದೆ. ಅವರ ಕಾಲು ಹಾಗೂ ಪಕ್ಕೆಲುಬುಗಳಿಗೆ ಗುಂಡೇಟು ತಗುಲಿದೆ ಎಂದು ವರದಿಯಾಗಿದೆ. ತಕ್ಷಣವೇ ದಾಳಿಕೋರರನ್ನು ಸೆರೆ ಹಿಡಿದಿರುವ ಗ್ರಾಮಸ್ಥರು, ಆತನನ್ನು ವಿಚಾರಣೆಗೊಳಪಡಿಸಿದರು ಎನ್ನಲಾಗಿದೆ.

ಈ ದಾಳಿಯನ್ನು ಬಲವಾಗಿ ಖಂಡಿಸಿರುವ ಸುದ್ದಿ ವಾಹಿನಿಯ ಸಂಪಾದಕಿ, ಈ ದಾಳಿಯು ಕೇವಲ ನನ್ನ ವರದಿಗಾರನ ಮೇಲಿನ ದಾಳಿ ಮಾತ್ರವಲ್ಲ; ಬದಲಿಗೆ ಪತ್ರಿಕಾ ಸ್ವಾತಂತ್ರ್ಯ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ನಡೆದಿರುವ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದ ವಿರುದ್ಧ ನಡೆಯುವ ಇಂತಹ ಹಿಂಸಾಚಾರಗಳನ್ನು ನ್ಯಾಯ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವದಂತಹ ಮೌಲ್ಯಗಳನ್ನು ಗೌರವಿಸುವ ಸಮಾಜ ಸಹಿಸುವುದಿಲ್ಲ ಹಾಗೂ ಸಹಿಸಿಕೊಳ್ಳಬಾರದು ಎಂದು ಅವರು ಕರೆ ನೀಡಿದ್ದಾರೆ.

ಸಂತ್ರಸ್ತ ವರದಿಗಾರನ ಕುಟುಂಬಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಸುದ್ದಿ ವಾಹಿನಿ, ವರದಿಗಾರನ ಶೀಘ್ರ ಚೇತರಿಕೆಗೆ ಹಾರೈಸಿದೆ. ಪ್ರಜಾಸತ್ತಾತ್ಮಕ ಸಮಾಜದಲ್ಲಿ ಹಿಂಸೆಗೆ ಯಾವುದೇ ಸ್ಥಾನವಿಲ್ಲ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವುದು ಸರಕಾರ, ನಾಗರಿಕ ಸಮಾಜ ಹಾಗೂ ಪ್ರಜೆಗಳ ಹೊಣೆಗಾರಿಕೆಯಾಗಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News