×
Ad

ಉತ್ತರಾಖಂಡ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಪ್ರಥಮ ವಿಡಿಯೊ ಬಿಡುಗಡೆ

Update: 2023-11-21 11:46 IST

Screengrab: X/PTI

ಉತ್ತರಕಾಶಿ: ಕಳೆದ 10 ದಿನಗಳಿಂದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ಪ್ರಥಮ ವಿಡಿಯೊವನ್ನು ಮಂಗಳವಾರ ರಕ್ಷಣಾ ಪಡೆಗಳು ಬಿಡುಗಡೆಗೊಳಿಸಿವೆ.

ಪರ್ಯಾಯ ಆಹಾರ ಕೊಳವೆಯ ಮೂಲಕ ರವಾನಿಸಲಾಗಿದ್ದ ಎಂಡೋಸ್ಕೋಪಿಕ್ ಕ್ಯಾಮೆರಾ ಮೂಲಕ ಈ ದೃಶ್ಯಾವಳಿಗಳನ್ನು ಸೆರೆ ಹಿಡಿಯಲಾಗಿದೆ.

ಆ ವಿಡಿಯೊದಲ್ಲಿ ಹಳದಿ ಮತ್ತು ಬಿಳಿ ಬಣ್ಣದ ಹೆಲ್ಮೆಟ್ ಗಳನ್ನು ಧರಿಸಿರುವ ಕಾರ್ಮಿಕರು ಆಹಾರ ಪದಾರ್ಥಗಳನ್ನು ಸ್ವೀಕರಿಸುತ್ತಾ, ಪರಸ್ಪರ ಮಾತನಾಡುತ್ತಿರುವುದು ಸೆರೆಯಾಗಿದೆ.

ಇದು ಕಾರ್ಮಿಕರ ಕುಟುಂಬದ ಸದಸ್ಯರಿಗೆ ದೊಡ್ಡ ನಿರಾಳತೆಯನ್ನುಂಟು ಮಾಡಿದೆ.

ಇದಕ್ಕೂ ಮುನ್ನ ಕಾರ್ಮಿಕರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರಿಯಲು ಕೊಳವೆ ಮಾರ್ಗದ ಮೂಲಕ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ನಿಗಮ ನಿಯಮಿತ(NHIDCL)ದ ನಿರ್ದೇಶಕ ಅನ್ಶು ಮನೀಶ್ ಖಾಲ್ಕೊ ತಿಳಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News