×
Ad

ನಿವೃತ್ತನಾಗಿದ್ದೇನೆ, ಇನ್ನು ಕುಸ್ತಿಗೂ ನನಗೂ ಸಂಬಂಧವಿಲ್ಲ: ಬಿಜೆಪಿ ಸಂಸದ ಬ್ರಿಜ್‌ ಭೂಷಣ್

Update: 2023-12-26 18:24 IST

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ | Photo: ANI 

ಹೊಸದಿಲ್ಲಿ: “ನಾನು ಕುಸ್ತಿಯಿಂದ ನಿವೃತ್ತನಾಗಿದ್ದೇನೆ, ಅದಕ್ಕೂ ನನಗೂ ಈಗ ಸಂಬಂಧವಿಲ್ಲ,” ಎಂದು ಭಾರತದ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಹೇಳಿದ್ದಾರೆ. ಫೆಡರೇಷನ್‌ಗೆ ಹೊಸ ಅಧ್ಯಕ್ಷರಿರುವುದರಿಂದ ಅವರು ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.

ತಮ್ಮ ಆಪ್ತನೆಂದೇ ಬಣ್ಣಿಸಲಾದ ಸಂಜಯ್‌ ಸಿಂಗ್‌ ಫೆಡರೇಷನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರದ ವಿವಾದಗಳ ಹಿನ್ನೆಲೆಯಲ್ಲಿ ಬ್ರಿಜ್‌ ಭೂಷಣ್‌ ಹೇಳಿಕೆ ಬಂದಿದೆ.

“ನಾನು ವಿವಾದದಿಂದ ದೂರ ಸರಿದಿದ್ದೇನೆ. ಕುಸ್ತಿಯಿಂದ ನಿವೃತ್ತನಾಗಿದ್ದೇನೆ. ಅದಕ್ಕೂ ನನಗೂ ಸಂಬಂಧವಿಲ್ಲ. ಈ ವಿಚಾರದಿಂದ ಸಂಪೂರ್ಣವಾಗಿ ನಿವೃತ್ತನಾಗಿದ್ದೇನೆ. ಒಳ್ಳೆಯದೋ, ಕೆಟ್ಟದ್ದೋ, 12 ವರ್ಷ ಈ ಕ್ಷೇತ್ರದಲ್ಲಿ ದುಡಿದಿದ್ದೇನೆ,” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News