×
Ad

ಎಐಎಂಐಎಂ ಮುಖಂಡನ ಹತ್ಯೆಯ ಬೆನ್ನಲ್ಲೇ ಬಿಹಾರದಲ್ಲಿ ಆರ್ ಎಲ್ ಜೆಡಿ ನಾಯಕನಿಗೆ ಗುಂಡೇಟು

Update: 2023-12-25 10:55 IST

Photo: Pexels

ಪಾಟ್ನಾ: ಎಐಎಂಐಎಂ ಮಾಜಿ ಜಿಲ್ಲಾಧ್ಯಕ್ಷ ಸಿವಾನ್ನಲ್ಲಿ ಹತ್ಯೆಯಾದ ಮರುದಿನವೇ, ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಜನತಾದಳ (ಆರ್ ಎಲ್ ಜೆಡಿ) ಪಕ್ಷದ ಯುವ ಮುಖಂಡನಿಗೆ ಪಕ್ಕದ ಶರನ್ ಜಿಲ್ಲೆಯಲ್ಲಿ ರವಿವಾರ ರೌಡಿಗಳು ಗುಂಡು ಹಾರಿಸಿರುವುದು ಇಡೀ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಉತ್ಸವ್ ಸಿಂಗ್ (19) ಆರ್ ಎಲ್ ಜೆಡಿ ಪಕ್ಷದ ಯುವ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದು, ರವಿವಾರ ಬೆಳಿಗ್ಗೆ 9.50ರ ಸುಮಾರಿಗೆ ಮೆಹಿಯಾ ಸಮೀಪದಲ್ಲಿ ಬೈಕ್ನಲ್ಲಿ ಬಂದ ನಾಲ್ಕು ಮಂದಿ ಅಪರಾಧಿಗಳು ತೀರಾ ಸನಿಹದಿಂದ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News