×
Ad

ಥಾಣೆ| ರಸ್ತೆಯಲ್ಲಿ ವಾಹನ ಸವಾರರ ಮಧ್ಯೆ ಘರ್ಷಣೆ: ಪಾದಚಾರಿಯನ್ನು ಎಳೆದೊಯ್ದ ಎಸ್‌ಯುವಿ ಕಾರು

Update: 2024-08-21 14:58 IST

Image Credit: Screengrab from X

ಥಾಣೆ(ಮಹಾರಾಷ್ಟ್ರ): ರಸ್ತೆಯಲ್ಲಿ ವಾಹನ ಸವಾರರ ನಡುವೆ ಘರ್ಷಣೆ ನಡೆದು, ಟಾಟಾ ಹ್ಯಾರಿಯರ್ ಎಸ್‌ಯುವಿಯು ಟೊಯೊಟಾ ಫಾರ್ಚುನರ್ ಗೆ ಎರಡು ಬಾರಿ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರನ್ನು ಎಳೆದೊಯ್ದು ಘಟನೆ ಮಂಗಳವಾರ ಥಾಣೆಯಲ್ಲಿ ವರದಿಯಾಗಿದೆ.

ಬೆಳಿಗ್ಗೆ 11ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹ್ಯಾರಿಯರ್ ಕಾರು ಚಾಲಕ ಮೊದಲು ಫಾರ್ಚುನರ್ ಕಾರನ್ನು ಹಿಂದಿನಿಂದ ಢಿಕ್ಕಿ ಹೊಡೆದು ನಂತರ ಅದನ್ನು ಮತ್ತೆ ಮುಂಭಾಗದಿಂದ ಅಡ್ಡ ಹಾಕಲು ಯು-ಟರ್ನ್ ಮಾಡಿದ ಎಂದು ತಿಳಿದು ಬಂದಿದೆ. ಫಾರ್ಚುನರ್ ಕಾರಿನಲ್ಲಿದ್ದ ಮಗು ಸೇರಿದಂತೆ ಪ್ರಯಾಣಿಕರು ಘಟನೆಯ ಭೀಕರತೆಗೆ ಭಯಭೀತರಾಗಿದ್ದರು ಎನ್ನಲಾಗಿದೆ.

ಈ ಮಧ್ಯೆ, ರಸ್ತೆ ಪಕ್ಕದಲ್ಲಿ ನಿಂತಿದ್ದ ಪಾದಚಾರಿಯೊಬ್ಬರಿಗೆ ಹ್ಯಾರಿಯರ್ ಕಾರು ಬಡಿದು ಹಲವಾರು ಮೀಟರ್‌ಗಳವರೆಗೆ ಎಳೆದಾಡಿತು ಎನ್ನಲಾಗಿದೆ. ಈ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಫಾರ್ಚುನರ್‌ ಕಾರಿನಲ್ಲಿದ್ದ ಮಗು ಭಯದಿಂದ ಕಿರುಚುತ್ತಿರುವುದನ್ನು ಕಾಣಬಹುದು.

ವಿಡಿಯೋ ವೈರಲ್ ಆಗುತ್ತಿದ್ದಂತೆ, ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು, ಅವರು ಈ ವಿಷಯವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News