×
Ad

‌ಪ್ರಧಾನಿ ಮೋದಿ ಉತ್ತರಾಧಿಕಾರಿ ಕುರಿತ ಪ್ರಶ್ನೆಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

Update: 2025-12-11 12:34 IST

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ (Photo: PTI)

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಕುರಿತು ದೇಶದ ರಾಜಕೀಯ ವಲಯದಲ್ಲಿ ಚರ್ಚೆ ಮತ್ತೆ ಜೋರಾಗಿರುವ ಸಂದರ್ಭದಲ್ಲಿ, RSS ಮುಖ್ಯಸ್ಥ ಮೋಹನ್ ಭಾಗವತ್ ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಚೆನ್ನೈನಲ್ಲಿ ಬುಧವಾರ ನಡೆದ ‘‘RSS 100 Years: Saga of RSS Envisioning the Way Forward’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೋದಿಯವರ ನಂತರ ಯಾರು ಎಂಬ ಪ್ರಶ್ನೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಮೋದಿ ಮತ್ತು ಬಿಜೆಪಿ ತೀರ್ಮಾನಿಸಬೇಕು,” ಎಂದರು.

ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಬ್ಬರು ಮುಂದಿನ ಪ್ರಧಾನಿ ಅಭ್ಯರ್ಥಿ ಕುರಿತು ಕೇಳಿದ ಪ್ರಶ್ನೆಗೆ ಭಾಗವತ್ ಪ್ರತಿಕ್ರಿಯಿಸಿದ್ದು, ತಮ್ಮ ಪಾತ್ರವೂ ಅಲ್ಲ, ಅದು RSSನ ಅಧಿಕಾರ ಕ್ಷೇತ್ರವೂ ಅಲ್ಲ ಎಂದು ಹೇಳಿದರು. “ನಾನು ಕೇವಲ ಶುಭ ಹಾರೈಸಬಹುದು, ಅದಕ್ಕಿಂತ ಹೆಚ್ಚಿನದಿಲ್ಲ,” ಎಂದೂ ಅವರು ತಿಳಿಸಿದ್ದಾರೆ.

ಭಾಗವತ್ ಅವರ ಈ ಹೇಳಿಕೆ, ಬಿಜೆಪಿಯಲ್ಲಿ 75 ವರ್ಷ ತುಂಬಿದ ನಂತರ ನಾಯಕರ ನಿವೃತ್ತಿಯ ಕುರಿತು ಇರುವ ‘ಅಲಿಖಿತ ನಿಯಮ’ದ ಚರ್ಚೆಯ ಮಧ್ಯೆ ಮಹತ್ವ ಪಡೆದುಕೊಂಡಿದೆ. ಆಗಸ್ಟ್‌ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು, ತಾನು ಅಥವಾ ಆರೆಸ್ಸೆಸ್ ಯಾವತ್ತೂ 75 ನೇ ವಯಸ್ಸಿನಲ್ಲಿ ನಿವೃತ್ತಿಯಾಗಬೇಕು ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸೆಪ್ಟೆಂಬರ್‌ನಲ್ಲಿ ಮೋದಿ 75 ವರ್ಷ ಪೂರೈಸಿದ ನಂತರ ರಾಜಕೀಯದಲ್ಲಿ ಮುಂದುವರಿಯುತ್ತಾರೆಯೇ ಎಂಬ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ, ಯಾವುದೇ ವಯೋಮಿತಿಯ ನಿಯಮವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News