ರಷ್ಯಾ ಸೇನೆಗೆ ಬಲವಂತವಾಗಿ ಸೇರಿಸಲಾಗಿದ್ದ 45 ಭಾರತೀಯರ ಬಿಡುಗಡೆ : ವಿದೇಶಾಂಗ ಸಚಿವಾಲಯ
Update: 2024-09-12 22:04 IST
PC : NDTV
ಹೊಸದಿಲ್ಲಿ : ರಷ್ಯಾ ಸೇನೆಗೆ ಬಲವಂತವಾಗಿ ಸೇರಿಸಿ ಉಕ್ರೈನ್ ವಿರುದ್ಧ ಹೋರಾಟಕ್ಕೆ ನಿಯೋಜಿಸಲಾಗಿದ್ದ 45 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಗುರುವಾರ ತಿಳಿಸಿದೆ.
ರಷ್ಯದ ಸೇನೆಯಲ್ಲಿರುವ ಇನ್ನೂ 50 ಭಾರತೀಯರನ್ನು ಇನ್ನಷ್ಟೇ ರಕ್ಷಿಸಬೇಕಾಗಿದೆ. ಅವರನ್ನು ಹಿಂದಕ್ಕೆ ಕರೆತರಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜುಲೈಯಲ್ಲಿ ಮಾಸ್ಕೊಗೆ ಭೇಟಿ ನೀಡಿದ ಸಂದರ್ಭ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾವಿಸಿದ್ದರು. ಇದಕ್ಕೆ ಪುಟಿನ್ ಅವರು ರಷ್ಯ ಸೇನೆಯಲ್ಲಿರುವ ಎಲ್ಲಾ ಭಾರತೀಯರ್ನು ಹಿಂದೆ ಕಳುಹಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.