×
Ad

ಎನ್ಐಎಯ ಪ್ರಧಾನ ನಿರ್ದೇಶಕರಾಗಿ ಮಹಾರಾಷ್ಟ್ರ ಎಟಿಎಸ್ ನ ಸದಾನಂದ ವಸಂತ್ ಡಾಟೆ ನಿಯೋಜನೆ

Update: 2024-03-28 23:14 IST

ಸದಾನಂದ ವಸಂತ್ ಡಾಟೆ | Photo: X \ @NewsIADN

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಪ್ರಧಾನ ನಿರ್ದೇಶಕರನ್ನಾಗಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ದ ವರಿಷ್ಠ ಸದಾನಂದ ವಸಂತ್ ಡಾಟೆ ಅವರನ್ನು ಸರಕಾರ ನೇಮಕ ಮಾಡಿದೆ.

ಮಂಗಳವಾರ ತಡ ರಾತ್ರಿ ಆದೇಶ ಜಾರಿಗೊಳಿಸಿದ ಕೇಂದ್ರ ಸರಕಾರದ ಉಪ ಕಾರ್ಯದರ್ಶಿ, ‘‘ಮಹಾರಾಷ್ಟ್ರ ಕೇಡರ್ನ 1990ರ ಬ್ಯಾಚ್ನ ಐಪಿಎಸ್ ಅಧಿಕಾರಿ ಸದಾನಂದ ಡಾಟೆ ಅವರನ್ನು ಎನ್ಐಎ ಪ್ರಧಾನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ಅಧಿಕಾರಾವಧಿ 2026 ಡಿಸೆಂಬರ್ 31 ರ ವರೆಗೆ ಅಥವಾ ಐಪಿಎಸ್ ಹುದ್ದೆಯಿಂದ ನಿವೃತ್ತಿಯಾಗುವ ವರೆಗೆ ಅಥವಾ ಮುಂದಿನ ಆದೇಶದ ವರೆಗೆ, ಯಾವುದೇ ಮೊದಲು ಅಲ್ಲಿವರೆಗೆ ಇರಲಿದೆ’’ ಎಂದಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಧಾನ ನಿರ್ದೇಶಕ ದಿನಕರ್ ಗುಪ್ತಾ ಅವರು ಮಾರ್ಚ್ 31ರಂದು ನಿವೃತ್ತರಾದ ಬಳಿಕ ಎನ್ಐಎಯ ನಾಯಕತ್ವವನ್ನು ಅವರು ವಹಿಸಿಕೊಳ್ಳಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News