×
Ad

ಲೋಕಸಭಾ ಚುನಾವಣೆ: ಕನೌಜ್‌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಅಖಿಲೇಶ್‌ ಯಾದವ್‌

Update: 2024-04-25 14:24 IST

ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಇಂದು ಕನೌಜ್‌ ಲೋಕಸಭಾ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರು ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಸುಬ್ರತ್‌ ಪಾಠಕ್‌ ಅವರನ್ನು ಎದುರಿಸಲಿದ್ದಾರೆ.

ಈ ಕ್ಷೇತ್ರದಿಂದ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಅವರ ಅಳಿಯ ತೇಜ್‌ ಪ್ರತಾಪ್‌ ಯಾದವ್‌ ಸ್ಪರ್ಧಿಸಲಿದ್ದಾರೆಂದು ಸಮಾಜವಾದಿ ಪಕ್ಷ ಈ ಹಿಂದೆ ಹೇಳಿತ್ತು. ಆದರೆ ಪಕ್ಷ ಕಾರ್ಯಕರ್ತರಲ್ಲಿ ಮೂಡಿದ ಅಸಮಾಧಾನದ ನಂತರ ಅಖಿಲೇಶ್‌ ತಾವೇ ಈ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಅಖಿಲೇಶ್‌ ಜೊತೆ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್‌ ಗೋಪಾಲ್‌ ಯಾದವ್‌ ಮತ್ತು ಇತರ ಹಿರಿಯ ನಾಯಕರಿದ್ದರು.

ಬಿಜೆಪಿ ಅಭ್ಯರ್ಥಿ ಸುಬ್ರತ್‌ ಪಾಠಕ್‌ ಕೂಡ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News