×
Ad

"ಉತ್ತರಪ್ರದೇಶ ಸರ್ಕಾರವೇ ಶಾಂತಿಯನ್ನು ಕೆಡಿಸಿದೆ": ಸಂಭಾಲ್ ಹಿಂಸಾಚಾರದ ಬಗ್ಗೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ

Update: 2024-11-25 12:36 IST

ಪ್ರಿಯಾಂಕಾ ಗಾಂಧಿ ವಾದ್ರಾ (PTI)

ಹೊಸದಿಲ್ಲಿ: ಉತ್ತರ ಪ್ರದೇಶ ಸರ್ಕಾರವೇ ರಾಜ್ಯದ ಶಾಂತಿಯುತ ವಾತಾವರಣವನ್ನು ಹಾಳು ಮಾಡಿದೆ ಎಂದು ಸಂಭಾಲ್ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಂಸದೆ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದ ಸಂಭಾಲ್‌ ನಲ್ಲಿನ ದಿಡೀರ್ ಎದ್ದ ವಿವಾದದ ಬಗ್ಗೆ ರಾಜ್ಯ ಸರ್ಕಾರದ ವರ್ತನೆ ತುಂಬಾ ದುರದೃಷ್ಟಕರ. ಎರಡೂ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ವರ್ತಿಸಿರುವುದು ಸರ್ಕಾರವೇ ಶಾಂತಿಯುತ ವಾತಾವರಣವನ್ನು ಹಾಳು ಮಾಡಿರುವುದನ್ನು ತೋರಿಸುತ್ತದೆ.

ಅಗತ್ಯ ಕಾರ್ಯವಿಧಾನಗಳು ಮತ್ತು ಕರ್ತವ್ಯಗಳನ್ನು ಅನುಸರಿಸುವುದು ಮುಖ್ಯವೆಂದು ಸರಕಾರ ಭಾವಿಸಿಲ್ಲ. ಅಧಿಕಾರದಲ್ಲಿ ಕುಳಿತು ತಾರತಮ್ಯ, ದಬ್ಬಾಳಿಕೆ ಮತ್ತು ವಿಭಜನೆಯನ್ನು ಹರಡಲು ಪ್ರಯತ್ನಿಸುವುದು ಜನರ ಹಿತಾಸಕ್ತಿ ಅಥವಾ ದೇಶದ ಹಿತಾಸಕ್ತಿಯಲ್ಲ. ಗೌರವಾನ್ವಿತ ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು ನ್ಯಾಯವನ್ನು ನೀಡಬೇಕು. ಎಲ್ಲ ಪರಿಸ್ಥಿತಿಯಲ್ಲೂ ಶಾಂತಿ ಕಾಪಾಡುವಂತೆ ನಾನು ರಾಜ್ಯದ ಜನತೆಗೆ ಮನವಿ ಮಾಡುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಎಕ್ಸ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News