×
Ad

ಅತ್ಯಾಚಾರ ಪ್ರಕರಣ | ಐಪಿಎಲ್ ಸ್ಥಾಪಕ ಲಲಿತ್ ಮೋದಿ ಸೋದರ ಸಮೀರ್ ಮೋದಿಗೆ ಜಾಮೀನು ಮಂಜೂರು

Update: 2025-09-25 20:04 IST

Photo Credit - IANS

ಹೊಸದಿಲ್ಲಿ,ಸೆ.25: ಐಪಿಎಲ್ ಸ್ಥಾಪಕ ಹಾಗೂ ಕೋಟ್ಯಂತರ ರೂ.ಗಳ ದುರುಪಯೋಗ ಆರೋಪವನ್ನು ಹೊತ್ತುಕೊಂಡು ದೇಶಭ್ರಷ್ಟರಾಗಿರುವ ಲಲಿತ್ ಮೋದಿ ಸೋದರ ಸಮೀರ್ ಮೋದಿಗೆ ದಿಲ್ಲಿಯ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಗುರುವಾರ ಜಾಮೀನು ಮಂಜೂರು ಮಾಡಿದೆ. 2019ರಿಂದಲೂ ತನ್ನ ಸಹೋದ್ಯೋಗಿಯಾಗಿದ್ದ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದ, ಬೆದರಿಕೆಯೊಡ್ಡಿದ ಮತ್ತು ವಂಚನೆ ಆರೋಪಗಳನ್ನು ಮೋದಿ ಎದುರಿಸುತ್ತಿದ್ದಾರೆ.

ಐದು ಲ.ರೂ.ಗಳ ಬಾಂಡ್ ಮತು ಇತರ ಹಲವಾರು ಷರತ್ತುಗಳಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಪಿನ್ ಖರ್ಬ್ ಅವರು ಮಂಗಳವಾರ ಆದೇಶವನ್ನು ಕಾಯ್ದಿರಿಸಿದ್ದರು.

ಖಾಸಗಿಯಾಗಿ ವಿಚಾರಣೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದವರು ಮಾತ್ರ ಉಪಸ್ಥಿತರಿದ್ದರು.

ಸೆ.10ರಂದು ಮೋದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಬಳಿಕ ಅವರ ವಿರುದ್ಧ ಲುಕ್ಔಟ್ ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಸೆ.18ರಂದು ದಿಲ್ಲಿಯಿಂದ ಆಗಮಿಸಿದ್ದ ಅವರನ್ನು ಪೋಲಿಸರು ಬಂಧಿಸಿದ್ದರು. ಸೆ.19ರಂದು ನ್ಯಾಯಾಲಯವು ಮೋದಿಯವರನ್ನು ಎರಡು ದಿನಗಳ ಅವಧಿಗೆ ಪೋಲಿಸ್ ಕಸ್ಟಡಿಗೆ ನೀಡಿತ್ತು. ರವಿವಾರ ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News