ಮನೆ ಮೇಲೆ ಪತನಗೊಂಡ ಲಘು ವಿಮಾನ; ಆರು ಮಂದಿ ಮೃತ್ಯು
ಸ್ಯಾನ್ ಡಿಯಾಗೋ: ಖ್ಯಾತ ಸಂಗೀತ ಕಾರ್ಯಕ್ರಮ ಸಂಯೋಜನ ಡೇವ್ ಶಾಪಿರೊ ಸೇರಿದಂತೆ ಆರು ಮಂದಿಯನ್ನು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನವೊಂದು ಗುರುವಾರ ಮುಂಜಾನೆ ಸ್ಯಾನ್ ಡಿಯಾಗೋ ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಆರು ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ನಡೆದಿದೆ. ಅಮೆರಿಕ ನೌಕಾಪಡೆಯ ಸಿಬ್ಬಂದಿಗಳ ವಸತಿ ಪ್ರದೇಶವಾದ ಮರ್ಫಿ ಕ್ಯಾನ್ಯಾನ್ ಬಳಿ ಈ ಅಪಘಾತ ಸಂಭವಿಸಿದ್ದು, ಈ ಅಪಘಾತದಿಂದ ಸ್ಫೋಟಗೊಂಡ ಬೆಂಕಿಯ ಜ್ವಾಲೆಯಿಂದಾಗಿ ಮನೆಗಳು ಹಾನಿಗೀಡಾಗಿವೆ. ಈ ಘಟನೆಯಲ್ಲಿ ಕನಿಷ್ಠ ಎಂಟು ಮಂದಿ ಸ್ಥಳೀಯ ನಿವಾಸಿಗಳು ಗಾಯಗೊಂಡಿದ್ದಾರೆ ಎಂದು Associated Press ಸುದ್ದಿ ಸಂಸ್ಥೆ ವರದಿ ಮಾಡಿದೆ.
1985ರ ಮಾದರಿಯಾದ ಸೆಸ್ನಾ 550 ಸೈಟೇಶನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಆರು ಮಂದಿಯೂ ಮೃತಪಟ್ಟಿದ್ದಾರೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ದೃಢಪಡಿಸಿದೆ. ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಈ ಘಟನೆಯಲ್ಲಿ ಯಾರಾದರೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಬೆಳಗಿನ ದಟ್ಟ ಮಂಜಿನ ನಡುವೆ ಹಾರಾಟ ನಡೆಸುತ್ತಿದ್ದ ವಿಮಾನವು ಮೊದಲು ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿಯಾಗಿ ಬಳಿಕ ಮನೆ ಮೇಲೆ ಪತನಗೊಂಡಿದೆ. ಇದರಿಂದಾಗಿ, ವಿಮಾನದ ಇಂಧನವು ಬೀದಿಗಳಲ್ಲಿ ಚೆಲ್ಲಿದ್ದು, ಹಲವು ವಾಹನಗಳಿಗೆ ಬೆಂಕಿ ತಗುಲಿದೆ ಎಂದು ವರದಿಯಾಗಿದೆ.