"ಪ್ರಧಾನಿ ಮೋದಿ ಪದವಿ ಕುರಿತ ಜನರ ಗಮನ ಬೇರೆಡೆ ಸೆಳೆಯಲು ಈಡಿ ದಾಳಿ": ಸೌರಭ್ ಭಾರದ್ವಾಜ್ ಮನೆ ಮೇಲೆ ಈಡಿ ದಾಳಿಗೆ ಆಪ್ ಟೀಕೆ
ಸೌರಭ್ ಭಾರದ್ವಾಜ್ | PC : PTI
ಹೊಸದಿಲ್ಲಿ: ಪ್ರಧಾನಿ ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಆಪ್ ನಾಯಕ ಸೌರಭ್ ಭಾರದ್ವಾಜ್ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಈಡಿ) ದಾಳಿ ನಡೆಸಿದೆ ಎಂದು ಆಪ್ ಆರೋಪಿಸಿದೆ.
"ಮೋದಿ ಅವರ ಪದವಿ ಕುರಿತ ಸುದ್ದಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಸೌರಭ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ಪ್ರಕರಣ ದಾಖಲಾದಾಗ ಸೌರಭ್ ಭಾರದ್ವಾಜ್ ಸಚಿವರೂ ಆಗಿರಲಿಲ್ಲ. ಈ ಪ್ರಕರಣ ಸಂಪೂರ್ಣ ಸುಳ್ಳು" ಎಂದು ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷವು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಗಟ್ಟಿ ಧ್ವನಿಯಾಗಿದೆ. ಹೀಗಾಗಿಯೇ ಎಎಪಿ ನಾಯಕ ಸೌರಭ್ ಭಾರದ್ವಾಜ್ ಮನೆ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ದಾಳಿ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈಡಿ ದಾಳಿ ಕುರಿತು ಪ್ರತಿಕ್ರಿಯಿಸಿರುವ ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಆಪ್ ಪಕ್ಷವು ಎನ್‌ಡಿಎ ಸರ್ಕಾರದ ವಿರುದ್ಧ ಗಟ್ಟಿ ಧ್ವನಿಯಾಗಿದ್ದು, ಇದೇ ಕಾರಣದಿಂದ ಸೌರಭ್ ಭಾರದ್ವಾಜ್ ಮನೆ ಮೇಲೆ ಈಡಿ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ಆಪ್ ಪಕ್ಷವು ಬಿಜೆಪಿ ದಾಳಿಗಳಿಗೆ ಭಯಪಡುವುದಿಲ್ಲ. ಕೇಂದ್ರ ಸರಕಾರದ ತಪ್ಪು ನೀತಿಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.