×
Ad

ಪವನ್‌ ಕಲ್ಯಾಣ್‌ ಪಕ್ಷ-ಟಿಡಿಪಿ ನಡುವೆ ಸ್ಥಾನ ಹಂಚಿಕೆ ಅಂತಿಮ

Update: 2024-02-24 22:03 IST

ಪವನ್‌ ಕಲ್ಯಾಣ್‌ , ಎನ್.ಚಂದ್ರಬಾಬು ನಾಯ್ಡು | Photo: X \ @jaiTDP

ಅಮರಾವತಿ : ಪವನ್‌ ಕಲ್ಯಾಣ್‌ ಅವರ ಜನಸೇನಾ ಮತ್ತು ಎನ್.ಚಂದ್ರಬಾಬು ನಾಯ್ಡು ಅವರ ಟಿಡಿಪಿ ನಡುವೆ ಸ್ಥಾನ ಹಂಚಿಕೆ ಅಂತಿಮಗೊಂಡಿದೆ.

ನಾಯ್ಡು ಮತ್ತು ಪವನ್‌ ಕಲ್ಯಾಣ್‌ ಮುಂಬರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗಾಗಿ 118 ಅಭ್ಯರ್ಥಿಗಳ ತಮ್ಮ ಮೊದಲ ಜಂಟಿ ಪಟ್ಟಿಯನ್ನು ಶನಿವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು. ಟಿಡಿಪಿ 94 ಮತ್ತು ಜನಸೇನಾ 24 ಸ್ಥಾನಗಳಿಗೆ ಸ್ಪರ್ಧಿಸಲಿವೆ.

ಬಿಜೆಪಿಯು ತಮ್ಮ ಮೈತ್ರಿಕೂಟವನ್ನು ಸೇರಲು ಬಯಸಿದರೆ ಅದಕ್ಕೆ ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಬೇಕಾದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸ್ಥಾನ ಹಂಚಿಕೆಯನ್ನು ಮಾಡಲಾಗಿದೆ ಎಂದು ಉಭಯ ನಾಯಕರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News