×
Ad

60 ನಕ್ಸಲೀಯರ ಜೊತೆ ಹಿರಿಯ ಮಾವೋವಾದಿ ವೇಣುಗೋಪಾಲ್ ಶರಣಾಗತಿ

Update: 2025-10-14 20:51 IST

 ವೇಣುಗೋಪಾಲ ರಾವ್ | Photo Credit : X \ @apf_ind

ಮುಂಬೈ: ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ಯ ಪಾಲಿಟ್‌ಬ್ಯೂರೋ ಸದಸ್ಯ ಹಾಗೂ ಪ್ರಮುಖ ನಕ್ಸಲ್ ನಾಯಕರ ಪೈಕಿ ಒಬ್ಬನಾಗಿರುವ ಮಲ್ಲೋಜುಲ ವೇಣುಗೋಪಾಲ ರಾವ್ ಯಾನೆ ಸೋನು ಸೋಮವಾರ ರಾತ್ರಿ ಶರಣಾಗಿದ್ದಾನೆ. ಆತನೊಂದಿಗೆ 60 ಸಹ ನಕ್ಸಲೀಯರೂ ಶರಣಾಗಿದ್ದಾರೆ.

ವೇಣುಗೋಪಾಲ್ ಯಾನೆ ಭೂಪತಿ ಯಾನೆ ಸೋನು ಹಾಗೂ ಕೇಂದ್ರೀಯ ಸಮಿತಿಯ ಓರ್ವ ಸದಸ್ಯ ಮತ್ತು ವಿಭಾಗೀಯ ಸಮಿತಿಯೊಂದರ 10 ಸದಸ್ಯರು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರ ಮುಂದೆ ಶರಣಾದರು ಎಂದು ಮೂಲಗಳು ತಿಳಿಸಿವೆ.

ಸೋನು ಮಾವೋವಾದಿ ಸಂಘಟನೆಯಲ್ಲಿ ಅತ್ಯಂತ ಪ್ರಭಾವಿ ನಾಯಕರ ಪೈಕಿ ಒಬ್ಬನಾಗಿದ್ದನು ಮತ್ತು ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಗಳ ಉಸ್ತುವಾರಿ ಹೊಂದಿದ್ದನು. ಅತನ ತಲೆಗೆ ವಿವಿಧ ರಾಜ್ಯಗಳು 10 ಕೋಟಿ ರೂ. ಬಹುಮಾನ ಘೋಷಿಸಿದ್ದವು.

‘‘ಸೋನು ಬಾಹ್ಯ ಜಗತ್ತಿನೊಂದಿಗೆ ಸಂಬಂಧ ಹೊಂದಿದ್ದನು. ಆತನು ಮಾವೋವಾದಿ ಸಹಾನುಭೂತಿದಾರರು ಮತ್ತು ಬಾಹ್ಯ ಜಗತ್ತಿನ ಸಂಘಟನೆಗಳ ನಡುವಿನ ಕೊಂಡಿಯಾಗಿದ್ದನು. ಆತನ ನಿರ್ಗಮನವೊಂದಿಗೆ ಮಾವೋವಾದಿ ಪಕ್ಷವು ಹಿನ್ನಡೆ ಅನುಭವಿಸಿದೆ’’ ಎಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದರು.

ಸೋನು ಶರಣಾಗುವ ಇಚ್ಛೆಯನ್ನು ಈ ವರ್ಷದ ಆದಿ ಭಾಗದಲ್ಲೇ ವ್ಯಕ್ತಪಡಿಸಿದ್ದನು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋನು ಮತ್ತು ಉನ್ನತ ನಕ್ಸಲ್ ನಾಯಕತ್ವದ ನಡುವೆ ಇತ್ತೀಚಿನ ತಿಂಗಳುಗಳಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿದ್ದವು ಮತ್ತು ಅದು ಪಕ್ಷದಲ್ಲಿ ಆಂತರಿಕ ಸಂಘರ್ಷಕ್ಕೆ ಕಾರಣವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಇದರಿಂದ ಬೇಸತ್ತು ಅವನು ಪಕ್ಷವನ್ನು ತೊರೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News