×
Ad

ಇಂಗ್ಲೆಂಡ್ ಲಯನ್ಸ್ ವಿರುದ್ಧ ಸರಣಿ ; ಭಾರತ ಎ ತಂಡ ಪ್ರಕಟ, ಅಭಿಮನ್ಯು ಈಶ್ವರನ್ ನಾಯಕ

Update: 2024-01-06 22:44 IST

ಅಭಿಮನ್ಯು ಈಶ್ವರನ್ |Photo: NDTV 

ಹೊಸದಿಲ್ಲಿ: ಭಾರತ ಎ ತಂಡ ಈ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ತಂಡವನ್ನು ಎದುರಿಸಲಿದ್ದು ಭಾರತದ ಪುರುಷರ ಆಯ್ಕೆ ಸಮಿತಿಯು ಶನಿವಾರ 13 ಸದಸ್ಯರನ್ನು ಒಳಗೊಂಡ ಭಾರತ ಎ ತಂಡವನ್ನು ಪ್ರಕಟಿಸಿದೆ.

ಅಭಿಮನ್ಯು ಈಶ್ವರನ್ ತಂಡದ ನಾಯಕತ್ವವಹಿಸಿದ್ದು, ದ್ವಿದಿನ ಅಭ್ಯಾಸ ಪಂದ್ಯ ಹಾಗೂ ಚತುರ್ದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದಾರೆ.

ಎರಡು ದಿನಗಳ ಪಂದ್ಯವು ಜನವರಿ 12ರಿಂದ ಆರಂಭವಾಗಲಿದ್ದು, ನಾಲ್ಕು ದಿನಗಳ ಪಂದ್ಯವು ಜನವರಿ 17ರಿಂದ ಆರಂಭವಾಗಲಿದೆ. ಎರಡೂ ಪಂದ್ಯಗಳು ಅಹ್ಮದಾಬಾದ್ ನಲ್ಲಿ ನಡೆಯಲಿದೆ.

ಭಾರತ ಎ ತಂಡ

ಅಭಿಮನ್ಯು ಈಶ್ವರನ್(ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಪ್ರದೋಶ್ ರಂಜನ್ ಪಾಲ್, ಕೆ.ಎಸ್.ಭರತ್(ವಿಕೆಟ್ಕೀಪರ್), ಮಾನವ್ ಸುಥರ್, ಪುಲ್ಕಿತ್ ನಾರಂಗ್, ನವದೀಪ್ ಸೈನಿ, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಧ್ರುವ್ ಜುರೆಲ್(ವಿಕೆಟ್ಕೀಪರ್) ಹಾಗೂ ಆಕಾಶ್ ದೀಪ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News