×
Ad

ಅಸ್ಸಾಂನಲ್ಲಿ ಗಂಭೀರ ನೆರೆ ಪರಿಸ್ಥಿತಿ 28 ಜಿಲ್ಲೆಗಳಲ್ಲಿ 23 ಲಕ್ಷ ಜನರು ಸಂತ್ರಸ್ತ

Update: 2024-07-08 22:04 IST

PC : PTI 

ಗುವಾಹಟಿ : ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಸೋಮವಾರ ಗಂಭೀರವಾಗಿದ್ದು, 28 ಜಿಲ್ಲೆಗಳ ಸುಮಾರು 23 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಹೆಚ್ಚಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ವರ್ಷ ಸಂಭವಿಸಿದ ನೆರೆಯಿಂದ 66 ಮಂದಿ ನೆರೆಯಿಂದ ಹಾಗೂ 78 ಮಂದಿ ಭೂಕುಸಿತ, ಚಂಡಮಾರುತದಿಂದ ಮೃತಪಟ್ಟಿದ್ದಾರೆ. ಪ್ರಸಕ್ತ 28 ಜಿಲ್ಲೆಗಳ 3,446 ಗ್ರಾಮಗಳಲ್ಲಿ ಸುಮಾರು 23 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. 68,432,75 ಹೆಕ್ಟೇರ್ ಬೆಳೆ ಭೂಮಿ ಜಲಾವೃತವಾಗಿದೆ.

ನೆರೆಯಿಂದಾಗಿ ಧುಬ್ರಿಯಲ್ಲಿ 7,54,791, ಕಚಾರ್ನಲ್ಲಿ 1,77,928 ಹಾಗೂ ಬಾರ್ಪೇಟಾದಲ್ಲಿ 1,34,328 ಜನರು ಸಂತ್ರಸ್ತರಾಗಿದ್ದಾರೆ. 269 ಪರಿಹಾರ ಕೇಂದ್ರಗಳಲ್ಲಿ ಒಟ್ಟು 53,689 ಜನರು ಆಶ್ರಯ ಪಡೆದುಕೊಂಡಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಳ್ಳದ 3,15.520 ಜನರಿಗೆ ಪರಿಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗಿದೆ ಎಂದು ಅದು ತಿಳಿಸಿದೆ.

ಬ್ರಹ್ಮಪುತ್ರ ನದಿ ನಿಮಾತಿಘಾಟ್, ತೇಜ್ಪುರ ಹಾಗೂ ಧುಬ್ರಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೋವಾಂಗ್ನಲ್ಲಿ ಬುರ್ಹಿ ದಿಹಿಂಗ್, ಶಿವಸಾಗರ್ನಲ್ಲಿ ದಿಖೋವು, ನಾಂಗ್ಲಾಮುರಾಘಾಟ್ನಲ್ಲಿ ದಿಸಾಂಗ್, ನುಮಾಲಿಗಢದಲ್ಲಿ ಧಾನಸಿರಿ, ಧರರಮ್ತುಲ್ನಲ್ಲಿ ಕೊಪಿಲಿ, ಬಾರ್ಪೇಟದಲ್ಲಿ ಬೇಕಿ, ಗೋಲಕ್ಗಂಜ್ನಲ್ಲಿ ಸಂಕೋಶ್, ಬಿಪಿ ಘಾಟ್ನಲ್ಲಿ ಬರಾಕ್ ಹಾಗೂ ಕರೀಂಗಂಜ್ನಲ್ಲಿ ಖುಶಿಯಾರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಅದು ತಿಳಿಸಿದೆ.

ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಸ್ಥಳೀಯಾಡಳಿತ ಸೇರಿದಂತೆ ಹಲವು ಸಂಸ್ಥೆಗಳು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ರಕ್ಷಣಾ ಕಾರ್ಯಾಚರಣೆಗೆ ವಿವಿಧ ಭಾಗಗಳಲ್ಲಿ 171 ದೋಣಿಗಳನ್ನು ನಿಯೋಜಿಸಲಾಗಿದೆ ಎಂದು ಅದು ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಹಲವು ಸಂಸ್ಥೆಗಳು 70ಕ್ಕೂ ಅಧಿಕ ಜನರು ಹಾಗೂ 459 ಜಾನುವಾರುಗಳನ್ನು ಅದು ರಕ್ಷಿಸಿದೆ. ರಾಜ್ಯಾದ್ಯಂತ ರಸ್ತೆ, ಸೇತುವೆ, ಅಂಗನಾವಡಿ ಕೇಂದ್ರ, ಮೀನು ಸಾಕಣೆ ಕೆರೆಗಳಿಗೆ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ನೆರೆಯಿಂದಾಗಿ ಕಾಝಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಕನಿಷ್ಠ 131 ವನ್ಯ ಜೀವಿಗಳು ಸಾವನ್ನಪ್ಪಿವೆ. 96 ವನ್ಯ ಜೀವಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಸೋಮವಾರ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ, ರಾಜ್ಯದಲ್ಲಿ ನೆರೆ ಮಾನವರು ಹಾಗೂ ಜಾನುವಾರುಗಳಿಗೆ ಹಾನಿ ಉಂಟು ಮಾಡಿದೆ. ಪ್ರತಿಯೊಬ್ಬರಿಗೂ ನೆರವು ನೀಡಲು ಅಸ್ಸಾಂನ ರಕ್ಷಣಾ ತಂಡ ಹಗಲಿರುಳು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News