×
Ad

ಹರ್ಯಾಣದಲ್ಲಿ ಬಿಜೆಪಿಗೆ ಹಿನ್ನಡೆ: ಹಿಸಾರ್ ಸಂಸದ ಬೃಜೇಂದ್ರ ಸಿಂಗ್ ರಾಜಿನಾಮೆ; ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

Update: 2024-03-10 13:08 IST

ಬೃಜೇಂದ್ರ ಸಿಂಗ್ | Photo: X 

ಚಂಡೀಗಢ: ಬಿಜೆಪಿ ಸಂಸದ ಬೃಜೇಂದ್ರ ಸಿಂಗ್ ರವಿವಾರ ಬಿಜೆಪಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಅವರ ಪುತ್ರರಾದ ಬೃಜೇಂದ್ರ ಸಿಂಗ್, ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ. 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಹಿಸಾರ್ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.

ಈ ಬಾರಿ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ದೊರೆಯುವುದಿಲ್ಲ ಎಂಬ ವದಂತಿಗಳು ಹರಿದಾಡುತ್ತಿದ್ದವು. ಬೃಜೇಂದ್ರ ಸಿಂಗ್ ಪ್ರಭಾವಶಾಲಿ ಜಾಟ್ ಸಮುದಾಯದ ನಾಯಕರಾಗಿದ್ದು, ಈಗಾಗಲೇ ಬಿಜೆಪಿಯು ರೈತರಿಂದ ಪ್ರತಿಭಟನೆ ಎದುರಿಸುತ್ತಿರುವುದರಿಂದ, ಸಿಂಗ್ ನಿರ್ಗಮನದಿಂದ ಬಿಜೆಪಿಗೆ ಆಘಾತವಾಗುವ ಸಾಧ್ಯತೆ ಇದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಬೃಜೇಂದ್ರ ಸಿಂಗ್, “ರಾಜಕೀಯ ಅನಿವಾರ್ಯತೆಯ ಕಾರಣಕ್ಕೆ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ. ನನಗೆ ಲೋಕಸಭಾ ಕ್ಷೇತ್ರದಿಂದ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News