×
Ad

ಮುಸ್ಲಿಂ ಬಾಲಕನಿಗೆ ಥಳಿಸಲು ಸೂಚಿಸಿದ್ದ ಶಿಕ್ಷಕಿಯ ವಿರುದ್ಧ ಹಾಕಲಾದ ಪೋಸ್ಟ್‌ಗಳಿಗೆ ನಿರ್ಬಂಧ: ಟ್ವಿಟರ್ ಬಳಕೆದಾರರ ಆರೋಪ

Update: 2023-08-26 20:41 IST

 Screenshots/Twitter

ಹೊಸದಿಲ್ಲಿ: ಏಳು ವರ್ಷದ ಮುಸ್ಲಿಂ ವಿದ್ಯಾರ್ಥಿಗೆ ಇತರೆ ವಿದ್ಯಾರ್ಥಿಗಳಿಂದ ಹಲ್ಲೆ ಮಾಡಿಸಿದ ಉತ್ತರ ಪ್ರದೇಶದ ಶಾಲಾ ಶಿಕ್ಷಕಿಯ ನಡೆಯನ್ನು ಖಂಡಿಸಿ ಸಾಮಾಜಿಕ ಮಾಧ್ಯಮ X (ಹಿಂದಿನ ಟ್ವಿಟರ್)‌ ನಲ್ಲಿ ಮಾಡಲಾಗಿರುವ ಹಲವಾರು ಪೋಸ್ಟ್‌ಗಳಿಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಶಿಕ್ಷಕಿಯ ಆಘಾತಕಾರಿ ವರ್ತನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ವ್ಯಕ್ತವಾಗಿದ್ದು, ಅನೇಕ ಬಳಕೆದಾರರು ಆರೋಪಿ ಶಿಕ್ಷಕಿ ತ್ರಿಪ್ತ ತ್ಯಾಗಿಯನ್ನು ಬಂಧಿಸಬೇಕೆಂದು ಕರೆ ನೀಡಿದ್ದರು. ‌

ಇಂತಹ ಹಲವಾರು ಪೋಸ್ಟ್‌ಗಳನ್ನು ಕಾಣಿಸದಂತೆ ತಡೆ ಹಿಡಿಯಲಾಗಿದೆ ಎಂದು ಎಕ್ಸ್‌ ಬಳಕೆದಾರರು ದೂರಿದ್ದಾರೆ. ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ದೇಶದಲ್ಲಿ ಪೋಸ್ಟ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಎಕ್ಸ್‌ ಬಳಕೆದಾರರಿಗೆ ತಿಳಿಸಿದೆ.

ಅವಹೇಳನಕಾರಿ ಭಾಷೆಯನ್ನು ಬಳಸದಿದ್ದರೂ ಅಥವಾ ತಪ್ಪು ಮಾಹಿತಿಯನ್ನು ಹರಡದಿದ್ದರೂ ನಮ್ಮ ಪೋಸ್ಟ್‌ಗಳನ್ನು ಏಕೆ ನಿರ್ಬಂಧಿಸಲಾಗಿದೆ ಎಂದು ನಟಿ ಊರ್ಮಿಳಾ ಮಾತೋಂಡ್ಕರ್, ಪತ್ರಕರ್ತರಾದ ರೋಹಿಣಿ ಸಿಂಗ್ ಮತ್ತು ಗಾರ್ಗಿ ರಾವತ್ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸಿದ್ದಾರೆ.

ಮಗುವಿಗೆ ಥಳಿಸುತ್ತಿರುವ ವಿಡಿಯೋವನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಶುಕ್ರವಾರ ಟ್ವಿಟರ್‌ಗೆ ತುರ್ತು ಆದೇಶ ಹೊರಡಿಸಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಆರೋಪಿಸಿದ್ದಾರೆ. ಶನಿವಾರ ಬೆಳಿಗ್ಗೆ, ಪ್ರಕರಣದ ಕುರಿತ ಲಿಂಕ್‌ಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ನಿರ್ಬಂಧಿಸಲು ಸರ್ಕಾರ ಹೆಚ್ಚುವರಿ ಆದೇಶಗಳನ್ನು ಹೊರಡಿಸಿದೆ ಎಂದು ಅವರು ಹೇಳಿದ್ದಾರೆ.

ಅದಾಗ್ಯೂ, ಬಾಲಕರು ಅಪ್ರಾಪ್ತರಾಗಿರುವುದರಿಂದ ಅವರ ಗುರುತನ್ನು ಬಹಿರಂಗಪಡಿಸುವುದು ಅಪರಾಧ. ಹಾಗಾಗಿ, ವೀಡಿಯೊವನ್ನು ಹಂಚಿಕೊಳ್ಳದಂತೆ ಕೆಲವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News