×
Ad

ಶರದ್ ಪವಾರ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ; ಎರಡು ಬಾರಿ ಟೇಕಾಫ್ ವಿಫಲ

Update: 2025-01-06 17:34 IST

ಶರದ್ ಪವಾರ್‌ | PC : X \ @harsht2024

ನವಿ ಮುಂಬೈ: ಎನ್‌ಸಿಪಿ ವರಿಷ್ಠ ಶರದ್ ಪವಾರ್ ಹಾಗೂ ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶಾಸಕ ಜಯಂತ್ ಪಾಟೀಲ್‌ರೊಂದಿಗೆ ಭದ್ರತಾ ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ರವಿವಾರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರತ್ನಗಿರಿ ಜಿಲ್ಲೆಯ ಚಿಪ್ಲುನ್‌ನಲ್ಲಿರುವ ಆಟದ ಮೈದಾನದಿಂದ ಟೇಕಾಫ್ ಮಾಡುವ ಪ್ರಯತ್ನದಲ್ಲಿ ಹೆಲಿಕಾಪ್ಟರ್ ಎರಡು ಬಾರಿ ವಿಫಲಗೊಂಡಿತು ಎಂದು ವರದಿಯಾಗಿದೆ.

ನಂತರ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವಲ್ಲಿ ಸಫಲಗೊಂಡ ಹೆಲಿಕಾಪ್ಟರ್, ಎರಡನೇ ಪ್ರಯತ್ನದ ನಂತರ, ತಾತ್ಕಾಲಿಕ ಹೆಲಿಪ್ಯಾಡ್ ಮೇಲಿಳಿಯಿತು ಎನ್ನಲಾಗಿದೆ. ಹೆಲಿಕಾಪ್ಟರ್ ಕಿಕ್ಕಿರಿದಿದ್ದರಿಂದ ಈ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ರತ್ನಗಿರಿಯಲ್ಲಿ ಆಯೋಜಿಸಲಾಗಿದ್ದ ವಶಿಷ್ಟಿ ಡೈರಿ ಕೃಷಿ ಮತ್ತು ಜಾನುವಾರು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಶರದ್ ಪವಾರ್ ಹಾಗೂ ಜಯಂತ್ ಪಾಟೀಲ್ ಆಗಮಿಸಿದ್ದರು.

"ಪವಾರ್ ಅವರು ತಮ್ಮ ಆಪ್ತ ಸಹಾಯಕನೊಂದಿಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ಕಾರ್ಯಕ್ರಮ ಮುಕ್ತಾಯಗೊಂಡ ನಂತರ, ಅವರನ್ನು ಜಯಂತ್ ಪಾಟೀಲ್ ಹಾಗೂ ಭದ್ರತಾ ಸಿಬ್ಬಂದಿಗಳು ಸೇರಿಕೊಂಡರು" ಎಂದು ಚಿಪ್ಲುನ್ ತಹಶೀಲ್ದಾರ್ ಪ್ರವೀಣ್ ಲೋಕರೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News