×
Ad

"ಭಾರತ ಇಲ್ಲವಾದರೆ ಯಾರು ಬದುಕುಳಿಯುತ್ತಾರೆ?": 'ನಿಷ್ಠೆ' ಕುರಿತ ಪ್ರಶ್ನೆಗೆ ನೆಹರೂ ಅವರ ಹೇಳಿಕೆ ಉಲ್ಲೇಖಿಸಿ ಪ್ರತಿಕ್ರಿಯಿಸಿದ ಶಶಿ ತರೂರ್

Update: 2025-07-20 17:45 IST

ಕಾಂಗ್ರೆಸ್ ಸಂಸದ ಶಶಿ ತರೂರ್ (Photo: PTI) 

ಹೊಸದಿಲ್ಲಿ : ʼಭಾರತ ಇಲ್ಲವಾದರೆ ಯಾರು ಬದುಕಿರುತ್ತಾರೆ?ʼ ಎಂದು ಶನಿವಾರ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಜವಾಹರಲಾಲ್ ನೆಹರು ಅವರ ಸಾಲುಗಳನ್ನು ಉಲ್ಲೇಖಿಸಿದ್ದಾರೆ.

ಇತ್ತೀಚಿನ ತನ್ನ ಹೇಳಿಕೆ ಮತ್ತು ಲೇಖನಗಳಿಂದ ಕಾಂಗ್ರೆಸ್ ನಾಯಕರಿಂದ ಟೀಕೆಗೆ ಗುರಿಯಾಗಿರುವ ತಿರುವನಂತಪುರಂ ಸಂಸದ ಶಶಿ ತರೂರ್, ರಾಷ್ಟ್ರದ ಹಿತಾಸಕ್ತಿ ಪಕ್ಷದ ರೇಖೆಗಳನ್ನು ಮೀರಿರಬೇಕು ಎಂದು ಹೇಳಿದ್ದಾರೆ.

ಯಾವುದೇ ಪ್ರಜಾಪ್ರಭುತ್ವದಲ್ಲಿ ದುರದೃಷ್ಟವಶಾತ್ ರಾಜಕೀಯ ಎಂದರೆ ಪೈಪೋಟಿ ಎಂಬುದಾಗಿದೆ. ನನ್ನಂತಹ ಜನರು ನಮ್ಮ ಪಕ್ಷಗಳನ್ನು ಗೌರವಿಸುತ್ತೇವೆ ಎಂದು ಹೇಳಿದಾಗ, ನಮಗೆ ಕೆಲವು ಮೌಲ್ಯಗಳು ಮತ್ತು ನಂಬಿಕೆಗಳು ಮುಖ್ಯವಾಗಿ ಅದು ನಮ್ಮನ್ನು ನಮ್ಮ ಪಕ್ಷಗಳಲ್ಲಿಯೇ ಉಳಿಸಿಕೊಳ್ಳುತ್ತದೆ ಎಂದು ಹೇಳಿದರು.

ಕೆಲವೊಮ್ಮೆ ಪಕ್ಷ ನಿಷ್ಠೆಯಿಲ್ಲ ಎಂದು ಭಾವಿಸಿ ಅದು ದೊಡ್ಡ ಸಮಸ್ಯೆಯಾಗುತ್ತದೆ. ನಿಮ್ಮ ಮೊದಲ ನಿಷ್ಠೆ ಯಾವುದು? ನನ್ನ ಅಭಿಪ್ರಾಯದಲ್ಲಿ ರಾಷ್ಟ್ರವು ಮೊದಲು ಬರುತ್ತದೆ ಎಂದು ಹೇಳಿದರು.

ನಮ್ಮ ಸಂಸತ್ತಿನಲ್ಲಿ ಇಂದು 46 ರಾಜಕೀಯ ಪಕ್ಷಗಳಿವೆ. ಅವರೆಲ್ಲರೂ ಒಗ್ಗೂಡುವ ಕೆಲವು ವಿಷಯಗಳಿರಬೇಕು. ಅದು ಖಂಡಿತವಾಗಿಯೂ ನನ್ನ ಉತ್ಸಾಹಭರಿತ ನಂಬಿಕೆ. ನಮ್ಮ ದೇಶದಲ್ಲಿ ಮತ್ತು ನಮ್ಮ ಗಡಿಗಳಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ನಮ್ಮ ಸಶಸ್ತ್ರ ಪಡೆಗಳು ಮತ್ತು ನಮ್ಮ ಸರಕಾರವನ್ನು ಬೆಂಬಲಿಸುವ ನನ್ನ ನಿಲುವಿನಿಂದಾಗಿ ಬಹಳಷ್ಟು ಜನರು ನನ್ನನ್ನು ತೀವ್ರವಾಗಿ ಟೀಕಿಸಿದ್ದಾರೆ. ಆದರೆ ನಾನು ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಏಕೆಂದರೆ ಇದು ಸೂಕ್ತವಾದುದು ಎಂದು ನಾನು ನಂಬುತ್ತೇನೆ. ನಾನು ಭಾರತದ ಬಗ್ಗೆ ಮಾತನಾಡುವಾಗ, ನನ್ನ ಪಕ್ಷವನ್ನು ಇಷ್ಟಪಡುವವರಿಗಾಗಿ ಮಾತ್ರವಲ್ಲ, ಎಲ್ಲಾ ಭಾರತೀಯರ ಪರವಾಗಿ ಮಾತನಾಡುತ್ತೇನೆ ಎಂದು ಶಶಿ ತರೂರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News