×
Ad

1975ರ ತುರ್ತು ಪರಿಸ್ಥಿತಿಯನ್ನು 'ಕರಾಳ ಅಧ್ಯಾಯ' ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

Update: 2025-07-10 16:39 IST

 ಕಾಂಗ್ರೆಸ್ ಸಂಸದ ಶಶಿ ತರೂರ್ (Photo: PTI)

ಹೊಸದಿಲ್ಲಿ : 1975ರ ತುರ್ತು ಪರಿಸ್ಥಿತಿಯನ್ನು ಭಾರತದ ಇತಿಹಾಸದಲ್ಲಿ ʼಕರಾಳ ಅಧ್ಯಾಯʼ ಎಂದು ಹೇಳುವ ಮೂಲಕ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೊಮ್ಮೆ ಪಕ್ಷದ ನಾಯಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಮಲಯಾಳಂ ದಿನಪತ್ರಿಕೆ ʼದೀಪಿಕಾʼದಲ್ಲಿ ಪ್ರಕಟಿಸಿದ ಲೇಖನದಲ್ಲಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ವಿಧಿಸಿದ್ದ 1975ರ ತುರ್ತು ಪರಿಸ್ಥಿತಿಯನ್ನು ಭಾರತದ ಇತಿಹಾಸದಲ್ಲಿ ʼಕರಾಳ ಅಧ್ಯಾಯʼ ಎಂದ ಶಶಿ ತರೂರ್, ಶಿಸ್ತು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡ ಪ್ರಯತ್ನಗಳು ಅನ್ಯಾಯದ ಕ್ರೌರ್ಯ ಕೃತ್ಯಗಳಾಗಿ ಬದಲಾಯಿತು ಎಂದು ಬರೆದಿದ್ದಾರೆ.

ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರು ಬಲವಂತದ ಸಂತಾನಹರಣ ಅಭಿಯಾನಗಳನ್ನು ನಡೆಸಿದರು. ಈ ಅವಧಿಯ ಕುಕೃತ್ಯಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ. ಈ ಗುರಿಯನ್ನು ಸಾಧಿಸಲು ಬಡ ಗ್ರಾಮೀಣ ಭಾಗದಲ್ಲಿ ಹಿಂಸೆ ಮತ್ತು ಬಲವಂತದಿಂದ ಸಂತಾನಹರಣ ಮಾಡಿಸಲಾಗುತ್ತಿತ್ತು. ದಿಲ್ಲಿಯಂತಹ ನಗರಗಳಲ್ಲಿ ಕೊಳಗೇರಿಗಳನ್ನು ಕರುಣೆಯೇ ಇಲ್ಲದೆ ನೆಲಸಮಗೊಳಿಸಲಾಯಿತು. ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಲಾಯಿತು. ಅವರ ಯೋಗಕ್ಷೇಮವನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ’ ಎಂದು ತರೂರ್ ಹೇಳಿದ್ದಾರೆ.

ಇಂದಿನ ಭಾರತ, 1975ರ ಭಾರತವಲ್ಲ. ನಾವು ಹೆಚ್ಚು ಆತ್ಮವಿಶ್ವಾಸವುಳ್ಳ, ಹೆಚ್ಚು ಅಭಿವೃದ್ಧಿ ಹೊಂದಿದ ಮತ್ತು ಹಲವು ವಿಧಗಳಲ್ಲಿ ಬಲವಾದ ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ. ಅಧಿಕಾರ ಕೇಂದ್ರೀಕರಣ, ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವ ಅಪಾಯಗಳಿವೆ. ರಾಷ್ಟ್ರದ ಹಿತಾಸಕ್ತಿ ಅಥವಾ ಸ್ಥಿರತೆಯ ಹೆಸರಿನಲ್ಲಿ ಇಂಥ ಪ್ರವೃತ್ತಿಗಳು ಮತ್ತೆ ಮರುಕಳಿಸುವ ಸಾಧ್ಯತೆಗಳಿವೆ. ಇಂಥ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿ ನಮಗೆ ಎಚ್ಚರಿಕೆಯಾಗಿದೆ . ಹೀಗಾಗಿ ಪ್ರಜಾಪ್ರಭುತ್ವದ ರಕ್ಷಕರು ಯಾವಾಗಲೂ ಜಾಗರೂಕರಾಗಿರಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News