×
Ad

ಲೋಕಸಭಾ ಸದಸ್ಯರಾಗಿ ಶತ್ರುಘ್ನ ಸಿನ್ಹಾ ಪ್ರಮಾಣ ವಚನ ಸ್ವೀಕಾರ

Update: 2024-07-22 20:35 IST

 ಶತ್ರುಘ್ನ ಸಿನ್ಹಾ | PC : ANI 

ಹೊಸದಿಲ್ಲಿ : ಟಿಎಂಸಿ ಸಂಸದ ಹಾಗೂ ನಟ ಶತ್ರುಘ್ನ ಸಿನ್ಹಾ ಅವರು ಸೋಮವಾರ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಿನ್ಹಾ ಪ್ರಮಾಣ ವಚನವನ್ನು ಸ್ವೀಕರಿಸಿದ ಕೊನೆಯ ಚುನಾಯಿತ ಅಭ್ಯರ್ಥಿಯಾಗಿದ್ದಾರೆ.

ಪಶ್ಚಿಮ ಬಂಗಾಳದ ಅಸನಸೋಲ್ ಕ್ಷೇತ್ರದಿಂದ ಗೆದ್ದಿರುವ ಸಿನ್ಹಾ ದೇವರ ಹೆಸರಿನಲ್ಲಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಜೂನ್ನಲ್ಲಿ ನಡೆದಿದ್ದ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಿನ್ಹಾರಿಗೆ ಸಾಧ್ಯವಾಗಿರಲಿಲ್ಲ.

ಲೋಕಸಭೆಯು 543 ಸಂಸದ ಬಲವನ್ನು ಹೊಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ಕೇರಳದ ವಯನಾಡ್ ಕ್ಷೇತ್ರವನ್ನು ತೆರವುಗೊಳಿಸಿದ್ದಾರೆ. ಎಲ್ಲ 542 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದು, ಸದನದಲ್ಲಿ ಒಂದು ಸದಸ್ಯ ಸ್ಥಾನ ಖಾಲಿಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News