ಬಾಹ್ಯಾಕಾಶದಲ್ಲಿ ಹೆಸರು ಕಾಳು, ಮೆಂತೆ ಬೆಳೆಸಿದ ಶುಭಾಂಶು ಶುಕ್ಲಾ
Update: 2025-07-09 21:59 IST
ಶುಭಾಂಶು ಶುಕ್ಲಾ | PC : PTI
ಹೊಸದಿಲ್ಲಿ: ತನ್ನ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿನ ಕಾರ್ಯಾಚರಣೆಯ ಅಂತಿಮ ಹಂತದಲ್ಲಿ ಭಾರತೀಯ ಗಗನ ಯಾತ್ರಿ ಶುಭಾಂಶು ಶುಕ್ಲಾ ರೈತನಾಗಿ ಬದಲಾಗಿದ್ದಾರೆ. ಅವರು ಪೆಟ್ರಿ ತಟ್ಟೆಗಳಲ್ಲಿ ಹೆಸರು ಕಾಳು ಹಾಗೂ ಮೆಂತೆ ಮೊಳಕೆಯೊಡೆಯುತ್ತಿರುವ ಫೋಟೊವನ್ನು ಕ್ಲಿಕ್ಕಿಸಿದ್ದಾರೆ.
ಅನಂತರ ಶುಕ್ಲಾ ಅದನ್ನು ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಶೇಖರಣಾ ಫ್ರೀಜರ್ ನಲ್ಲಿ ಇರಿಸಿದರು. ಇದು ಬೀಜ ಮೊಳೆಯೊಡೆಯುವಿಕೆ ಹಾಗೂ ಗಿಡದ ಆರಂಭಿಕ ಬೆಳವಣಿಗೆಯ ಮೇಲೆ ಶೂನ್ಯ ಗುರುತ್ವಾಕರ್ಷಣೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಕುರಿತ ಅಧ್ಯಯನದ ಭಾಗವಾಗಿದೆ.
ಶುಭಾಂಶು ಶುಕ್ಲಾ ಹಾಗೂ ಆ್ಯಕ್ಸಿಯಂ ಮಿಷನ್ 4 ತಂಡ ಸದಸ್ಯರು ಅಂತರ್ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 12 ದಿನಗಳನ್ನು ಕಳೆದಿದ್ದಾರೆ. ಅವರು ಫ್ಲೋರಿಡಾ ಕರಾಳಿಯ ಹವಾಮಾನ ಪರಿಸ್ಥಿತಿಯನ್ನು ಅವಲಂಬಿಸಿ ಜುಲೈ 10ರ ಬಳಿಕ ಭೂಮಿಗೆ ಹಿಂದಿರುಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.