×
Ad

ಒಡಿಶಾದ ಪ್ರಥಮ ಮುಸ್ಲಿಂ ಶಾಸಕಿಯಾಗಿ ಇತಿಹಾಸ ಸೃಷ್ಟಿಸಿದ ಸೋಫಿಯಾ ಫಿರ್ದೌಸ್‌

Update: 2024-06-07 17:46 IST

ಸೋಫಿಯಾ ಫಿರ್ದೌಸ್‌ 

ಹೊಸದಿಲ್ಲಿ: ಒಡಿಶಾದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗೆದ್ದ ಪ್ರಥಮ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಸೋಫಿಯಾ ಫಿರ್ದೌಸ್‌ ಪಾತ್ರರಾಗಿದ್ದಾರೆ.

ಬಾರಾಬತಿ-ಕಟಕ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ 32 ವರ್ಷದ ಸೋಫಿಯಾ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಬಿಜೆಪಿಯ ಪೂರ್ಣ ಚಂದ್ರ ಮಹಾಪಾತ್ರ ಅವರ ವಿರುದ್ಧ 8,001 ಮತಗಳಿಂದ ಜಯ ಗಳಿಸಿದ್ದಾರೆ.

ಇತ್ತೀಚೆಗೆ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 147 ಕ್ಷೇತ್ರಗಳ ಪೈಕಿ 78ರಲ್ಲಿ ಜಯ ಗಳಿಸಿ ಅಧಿಕಾರದ ಗದ್ದುಗೆಯೇರುತ್ತಿದೆ ಹಾಗೂ ಈ ಮೂಲಕ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿಯ 24 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News