×
Ad

ಜಾರ್ಖಂಡ್: ಪತಿಯೊಂದಿಗೆ ಬೈಕ್ ನಲ್ಲಿ ಪ್ರವಾಸ ಕೈಗೊಂಡಿದ್ದ ವಿದೇಶಿ ಮಹಿಳೆಯ ಸಾಮೂಹಿಕ ಅತ್ಯಾಚಾರ

Update: 2024-03-02 14:25 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ತನ್ನ ಪತಿಯೊಂದಿಗೆ ಬೈಕ್ ನಲ್ಲಿ ಪ್ರವಾಸ ಕೈಗೊಂಡಿದ್ದ ಸ್ಪ್ಯಾನಿಶ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಝಾರ್ಖಂಡ್ ರಾಜ್ಯದ ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ನಿರ್ಜನ ಪ್ರದೇಶವೊಂದರಲ್ಲಿ ಟೆಂಟ್ ನಲ್ಲಿ ರಾತ್ರಿ ಕಳೆಯಲು ದಂಪತಿಗಳು ತಂಗಿದ್ದಾಗ ಈ ಘಟನೆಯು ನಡೆದಿದೆ.

ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಾರ್ಮುಂಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್, “ಶುಕ್ರವಾರ ರಾತ್ರಿ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ” ಎಂದು ಮಾಹಿತಿ ನೀಡಿದ್ದಾರೆ.

ಪ್ರವಾಸಿ ದಂಪತಿಗಳು ಡುಮ್ಕಾ ಮೂಲಕ ಬಿಹಾರದ ಭಗಲ್ ಪುರ್ ಗೆ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಅವರು ರಾತ್ರಿ ಟೆಂಟ್ ನಲ್ಲಿ ಕಳೆಯಲು ಹಂಸ್ದಿಹಾ ಮಾರುಕಟ್ಟೆಯ ಬಳಿ ತಂಗಿದ್ದರು ಎಂದು ವರದಿಯಾಗಿದೆ.

ಪ್ರವಾಸಿ ದಂಪತಿಗಳು ದ್ವಿಚಕ್ರ ವಾಹನದಲ್ಲಿ ಬಾಂಗ್ಲಾದೇಶದಿಂದ ಡುಮ್ಕಾಗೆ ಬಂದಿದ್ದರು ಹಾಗೂ ಬಿಹಾರದ ಮೂಲಕ ನೇಪಾಳಕ್ಕೆ ತೆರಳುವವರಿದ್ದರು ಎಂದು ಹೇಳಲಾಗಿದೆ.

ಅತ್ಯಾಚಾರ ಆರೋಪಿಗಳು ಮಹಿಳೆಯ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತ ಮಹಿಳೆಗೆ ಡುಮ್ಕಾದ ಫುಲೊ ಝಾನೊ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News