×
Ad

ಗುರುವಾರ ಸಂಸತ್‌ನಲ್ಲಿ ‘ಛಾವಾ’ ಚಿತ್ರದ ವಿಶೇಷ ಪ್ರದರ್ಶನ

Update: 2025-03-25 22:38 IST

ʼಛಾವಾʼ ಚಿತ್ರ

ಹೊಸದಿಲ್ಲಿ: ಛತ್ರಪತಿ ಶಿವಾಜಿ ಮಹಾರಾಜಾ ಪುತ್ರ ಸಾಂಭಾಜಿಯ ಜೀವನಕಥೆ ಆಧಾರಿತ ʼಛಾವಾʼ ಚಿತ್ರದ ವಿಶೇಷ ಪ್ರದರ್ಶನವನ್ನು ರಾಜಕಾರಣಿಗಳಿಗಾಗಿ ಗುರುವಾರ ಸಂಸತ್‌ ಭವನದಲ್ಲಿ ಆಯೋಜಿಸಲಾಗಿದೆ.

ವಿಕ್ಕಿ ಕೌಶಲ್ ನಾಯಕನಾಗಿ ನಟಿಸಿರುವ ಈ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರುಗಳು ಹಾಗೂ ಸಂಸತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಛಾವಾ ಚಿತ್ರದ ನಿರ್ಮಾಪಕ ದಿನೇಶ್ ವಿಜನ್, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಹಾಗೂ ವಿಕ್ಕಿ ಕೌಶಲ್ ಸೇರಿದಂತೆ ಚಲಚಿತ್ರರಂಗದ ಗಣ್ಯ ವ್ಯಕ್ತಿಗಳು ಕೂಡಾ ಭಾಗವಹಿಸುವ ನಿರೀಕ್ಷೆಯಿದೆ.

ಭಾರತ ದೇಶದ ಶ್ರೀಮಂತ ಪರಂಪರೆಯ ಬಗ್ಗೆ ಬೆಳಕು ಚೆಲ್ಲಲು ಹಾಗೂ ಚಿತ್ರತಂಡದ ಕಲಾತ್ಮಕ ಸಾಧನೆಗಳನ್ನು ಸಂಭ್ರಮಿಸುವ ಉದ್ದೇಶದಿಂದ ಈ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸತ್‌ ಭವನದ ಹೇಳಿಕೆಯೊಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News