×
Ad

ಸಂಸತ್ ನ ವಿಶೇಷ ಅಧಿವೇಶನ: ಲೋಕಸಭಾ ಸಂಸದರಿಗೆ ವಿಪ್ ಜಾರಿ ಮಾಡಿದ ಬಿಜೆಪಿ

Update: 2023-09-14 13:47 IST

Photo: PTI

ಹೊಸದಿಲ್ಲಿ ಸೆ.14: ಸೆಪ್ಟಂಬರ್ 18ರಿಂದ 5 ದಿನಗಳ ಕಾಲ ನಡೆಯಲಿರುವ ಸಂಸತ್ ನ ವಿಶೇಷ ಅಧಿವೇಶನದ ಕಲಾಪಗಳಿಗೆ ತಪ್ಪದೆ ಹಾಜರಿರುವಂತೆ ಬಿಜೆಪಿ ತನ್ನ ಲೋಕಸಬಾ ಸಂಸದರಿಗೆ ವಿಪ್ ಜಾರಿ ಮಾಡಿದೆ.

ಸಂಸದರಿಗೆ ವಿಪ್ ಜಾರಿ ಮಾಡಿರುವ ಬಿಜೆಪಿ, ಸದನದಲ್ಲಿ ಚರ್ಚೆಯ ವೇಳೆ ಸರಕಾರದ ನಿಲುವುಗಳನ್ನು ಬೆಂಬಲಿಸುವಂತೆ ಸೂಚಿಸಿದೆ.

ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ತೀವ್ರ ಒತ್ತಡದ ಮಧ್ಯೆ ಕೇಂದ್ರ ಸರಕಾರ ಬುಧವಾರದಂದು ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಬಿಡುಗಡೆಗೊಳಿಸಿದೆ.

ವಿಧಾನಸಭೆಯಿಂದ ಸಂಸತ್ ವರೆಗೆ ನಡೆದುಬಂದ ಹಾದಿಯಲ್ಲಿನ ಸಾಧನೆಗಳು, ಅನುಭವಗಳು, ನೆನಪುಗಳು ಹಾಗೂ ಕಲಿಕೆ ಬಗ್ಗೆ ಮೊದಲ ದಿನ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಚರ್ಚೆ ಆರಂಭವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

ಇದರ ಜೊತೆಗೆ ವಿವಾದಿತ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಆಯುಕ್ತರು(ನೇಮಕಾತಿ, ಕರ್ತವ್ಯದ ನಿಬಂಧನೆಗಳು, ಅಧಿಕಾರವಧಿ)ಮಸೂದೆ ಸೇರಿದಂತೆ 5 ಮಸೂದೆಗಳಿಗೆ ಒಪ್ಪಿಗೆ ಪಡೆಯಲು ಸರಕಾರ ನಿರ್ಧರಿಸಿದೆ.

ಸಂಸತ್ತಿನ ವಿಶೇಷ ಅಧಿವೇಶನ ಸೆಪ್ಟಂಬರ್ 18ರಿಂದ 22ರ ತನಕ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News