×
Ad

ಮೋದಿ ಸರಕಾರದಿಂದ ರೈತರ ಧ್ವನಿಗಳ ದಮನ : ಖರ್ಗೆ

Update: 2024-02-13 21:06 IST

                                                                                      ಮಲ್ಲಿಕಾರ್ಜುನ ಖರ್ಗೆ | Photo:PTI 

ಹೊಸದಿಲ್ಲಿ: ಸುಮಾರು 10 ವರ್ಷಗಳಂದ ರೈತರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಮೋದಿ ಸರಕಾರವು ರೈತರ ಧ್ವನಿಯನ್ನು ದಮನಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆಪಾದಿಸಿದ್ದಾರೆ.

ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸಲು ದಿಲ್ಲಿಗೆ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ತಡೆಯಲು ಭಾರೀ ಸಂಖ್ಯೆಯ ಭದ್ರತಾಪಡೆಗಳನ್ನು ನಿಯೋಜಿಸಲಾಗಿದ್ದು, ರಾಷ್ಟ್ರರಾಜಧಾನಿ ವಸ್ತುಶಃ ಕೋಟೆಯಾಗಿ ಪರಿಣಮಿಸಿರುವ ಸಂದರ್ಭದಲ್ಲಿ ಅವರು ವಾಗ್ದಾಳಿ ನಡೆಸಿದ್ದಾರೆ.

‘‘ತಂತಿ ಬೇಲಿ, ಡ್ರೋನ್ಗಳಿಂದ ಆಶ್ರುವಾಯು, ಮೊಳೆಗಳು ಹಾಗೂ ಬಂದೂಕುಗಳು ಎಲ್ಲವನ್ನೂ ವ್ಯವಸ್ಥೆಗೊಳಿಸಲಾಗಿದೆ. ಸರ್ವಾಧಿಕಾರಿ ಮೋದಿ ಸರಕಾರವು ರೈತರ ಧ್ವನಿಯನ್ನು ಅದುಮಿಡಲು ಯತ್ನಿಸುತ್ತಿದೆ’’ ಎಂದು ಕಾಂಗ್ರೆಸ್ ವರಿಷ್ಠರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ರೈತರನ್ನು ‘ಆಂದೋಲನಜೀವಿ’ ಹಾಗೂ ‘ಪರಾವಲಂಭಿ’ ಎಂದು ಹೀಗಳೆಯುವ ಮೂಲಕ ಅವರಿಗೆ ಹೇಗೆ ಕಳಂಕ ತರಲಾಯಿತು ಮತ್ತು 750 ರೈತರು ಪ್ರಾಣ ಕಳೆದುಕೊಂಡರು ಎಂಬುದನ್ನು ನೆನಪಿಸಿಕೊಳ್ಳಿ ಎಂಬುದಾಗಿ ಖರ್ಗೆ ಹಿಂದಿಯಲ್ಲಿ ಮಾಡಿದ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರವು ದೇಶದ ಆನ್ನದಾತರಿಗೆ ನೀಡಿದ್ದ ಮೂರು ಭರವಸೆಗಳನ್ನು ಮುರಿದಿದೆಯೆಂದು ಹೇಳಿದರು.ರೈತ ಚಳವಳಿಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲವನ್ನು ಘೋಷಿಸಿದ ಅವ ರು ಛತ್ತೀಸ್ ಗಡದ ಅಂಬಿಕಾಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಕ್ಷವು ರೈತರ ಪರವಾಗಿ ಧ್ವನಿಯೆತ್ತಲಿದೆ ಎಂದು ಖರ್ಗೆ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News