×
Ad

14 ಮಂದಿ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಕೊಲಿಯಿಜಿಯಂ ಅಸ್ತು

ಕರ್ನಾಟಕ ಹೈಕೋರ್ಟ್ ಗೆ ವರ್ಗಾವಣೆಯಾಗಲಿರುವ ನ್ಯಾ. ತಾರಾ ವಿಸ್ತಾರ ಗಂಜು

Update: 2025-08-27 23:07 IST

PC | PTI

ಹೊಸದಿಲ್ಲಿ: ವಿವಿಧ ಹೈಕೋರ್ಟ್ ಗಳ 14 ಮಂದಿ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿದೆ.

ಆಗಸ್ಟ್ 25 ಹಾಗೂ 26ರಂದು ಸಭೆ ಸೇರಿದ್ದ ನ್ಯಾ. ಸೂರ್ಯಕಾಂತ್ ಹಾಗೂ ವಿಕ್ರಂನಾಥ್ ಅವರನ್ನೊಳಗೊಂಡಿದ್ದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮಧ್ಯಪ್ರದೇಶ ಹೈಕೋರ್ಟ್ ನಿಂದ ಛತ್ತೀಸ್ ಗಢ ಹೈಕೋರ್ಟ್ ಗೆ ನ್ಯಾ. ಅತುಲ್ ಶ್ರೀ ಧರನ್, ಛತ್ತೀಸ್ ಗಢ ಹೈಕೋರ್ಟ್ ನಿಂದ ಅಲಹಾಬಾದ್ ಹೈಕೋರ್ಟ್ ಗೆ ನ್ಯಾ. ಸಂಜಯ್ ಅಗರ್ವಾಲ್, ಮದ್ರಾಸ್ ಹೈಕೋರ್ಟ್ ನಿಂದ ಕೇರಳ ಹೈಕೋರ್ಟ್ ಗೆ ನ್ಯಾ. ಜೆ.ನಿಶಾ ಬಾನು, ರಾಜಸ್ಥಾನ ಹೈಕೋರ್ಟ್ ನಿಂದ ದಿಲ್ಲಿ ಹೈಕೋರ್ಟ್ ಗೆ ನ್ಯಾ. ದಿನೇಶ್ ಮೆಹ್ತಾ, ರಾಜಸ್ಥಾನ ಹೈಕೋರ್ಟ್ ನಿಂದ ದಿಲ್ಲಿ ಹೈಕೋರ್ಟ್ ಗೆ ನ್ಯಾ. ಅವನೀಶ್ ಝಿಂಗಾನ್, ದಿಲ್ಲಿ ಹೈಕೋರ್ಟ್ ನಿಂದ ರಾಜಸ್ಥಾನ ಹೈಕೋರ್ಟ್ ಗೆ ನ್ಯಾ. ಅರುಣ್ ಮೊಂಗಾ, ಅಲಹಾಬಾದ್ ಹೈಕೋರ್ಟ್ ನಿಂದ ಪಟ್ನಾ ಹೈಕೋರ್ಟ್ ಗೆ ನ್ಯಾ. ಸಂಜಯ್ ಕುಮಾರ್ ಸಿಂಗ್, ಅಲಹಾಬಾದ್ ಹೈಕೋರ್ಟ್ ನಿಂದ ಕಲ್ಕತ್ತಾ ಹೈಕೋರ್ಟ್ ಗೆ ನ್ಯಾ. ರೋಹಿತ್ ರಂಜನ್ ಅಗರ್ವಾಲ್, ಗುಜರಾತ್ ಹೈಕೋರ್ಟ್ ನಿಂದ ಆಂಧ್ರ ಪ್ರದೇಶ ಹೈಕೋರ್ಟ್ ಗೆ ನ್ಯಾ. ಮಾನವೇಂದ್ರ ನಾಥ್ ರಾಯ್, ಅಲಹಾಬಾದ್ ಹೈಕೋರ್ಟ್ ನಿಂದ ಆಂಧ್ರಪ್ರದೇಶ ಹೈಕೋರ್ಟ್ ಗೆ ನ್ಯಾ. ದೊನಾಡಿ ರಮೇಶ್, ಗುಜರಾತ್ ಹೈಕೋರ್ಟ್ ನಿಂದ ಮಧ್ಯಪ್ರದೇಶ ಹೈಕೋರ್ಟ್ ಗೆ ನ್ಯಾ. ಸಂದೀಪ್ ನಟ್ವರಾಲ್ ಭಟ್, ಕೇರಳ ಹೈಕೋರ್ಟ್ ನಿಂದ ದಿಲ್ಲಿ ಹೈಕೋರ್ಟ್ ಗೆ ನ್ಯಾ. ಚಂದ್ರಶೇಖರನ್ ಸುಧಾ, ದಿಲ್ಲಿ ಹೈಕೋರ್ಟ್ ನಿಂದ ಕರ್ನಾಟಕ ಹೈಕೋರ್ಟ್ ಗೆ ನ್ಯಾ. ತಾರಾ ವಿಸ್ತಾರ ಗಂಜು ಹಾಗೂ ಕಲ್ಕತ್ತಾ ಹೈಕೋರ್ಟ್ ನಿಂದ ಆಂಧ್ರ ಪ್ರದೇಶ ಹೈಕೋರ್ಟ್ ಗೆ ನ್ಯಾ. ಸುಭೇಂದು ಸಮಂತಾ ವರ್ಗಾವಣೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News