×
Ad

ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಜಾಮೀನು ನಿರಾಕರಣೆ ಬಗ್ಗೆ ಅಲಹಾಬಾದ್ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ತರಾಟೆ

Update: 2025-01-28 14:24 IST

ಹೊಸದಿಲ್ಲಿ: ಕಾನೂನುಬಾಹಿರ ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಜಾಮೀನು ನೀಡಲು ಮುಂದಾಗದ ಅಲಹಾಬಾದ್ ಹೈಕೋರ್ಟ್ ಅನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಮಾನಸಿಕ ಅಸ್ವಸ್ಥ ಅಪ್ರಾಪ್ತ ಬಾಲಕನನ್ನು ಮತಾಂತರಿಸಿದ ಆರೋಪ ಹೊತ್ತಿರುವ ಮುಸ್ಲಿಂ ಧರ್ಮಗುರುವಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್ ಗಳು ಜಾಮೀನು ನೀಡುವ ಬಗ್ಗೆ ತಮ್ಮ ವಿವೇಚನಾಧಿಕಾರವನ್ನು ಚಲಾಯಿಸಲು ಹಿಂಜರಿಯುತ್ತಿರುವುದನ್ನು ಟೀಕಿಸಿದೆ.

ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠವು, ಯಾವುದೇ ಅಪರಾಧ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಗಳು ಜಾಮೀನು ನೀಡುವ ಧೈರ್ಯವನ್ನು ವಿರಳವಾಗಿ ತೋರಿಸುತ್ತವೆ. ಆದರೆ, ಹೈಕೋರ್ಟ್ ಕನಿಷ್ಠ ಪಕ್ಷವಾದರೂ ಧೈರ್ಯವನ್ನು ಪ್ರದರ್ಶಿಸುತ್ತದೆ, ತನ್ನ ವಿವೇಚನಾಯುಕ್ತ ಅಧಿಕಾರವನ್ನು ನ್ಯಾಯಯುತವಾಗಿ ಬಳಸುತ್ತದೆ ಎಂದು ನಿರೀಕ್ಷಿಸಲಾಗಿತ್ತು ಎಂದು ಹೇಳಿದೆ.

ಕೊಲೆ, ದರೋಡೆ, ಅತ್ಯಾಚಾರ ಇತ್ಯಾದಿಗಳಂತೆ ಆಪಾದಿತ ಅಪರಾಧವು ಗಂಭೀರವಾಗಿಲ್ಲದಿದ್ದರೆ, ಜಾಮೀನು ಅರ್ಜಿಗಳು ಸುಪ್ರೀಂ ಕೋರ್ಟ್ ವರೆಗೂ ಬರಬಾರದು ಎಂದು ನ್ಯಾಯಾಲಯ ಹೇಳಿದೆ.

ಮಾನಸಿಕ ಅಸ್ವಸ್ಥ ಅಪ್ರಾಪ್ತ ಬಾಲಕನನ್ನು ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿ ಉತ್ತರಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ-2021ರ ಅಡಿಯಲ್ಲಿ ಮುಸ್ಲಿಂ ಧರ್ಮ ಗುರು ಓರ್ವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನು ಕೋರಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News