×
Ad

Syria: ISIL ಬಂಡುಕೋರರಿಗಾಗಿ ಎಸ್‌ಡಿಎಫ್‌ನಿಂದ ಶೋಧ ಕಾರ್ಯಾಚರಣೆ

Update: 2026-01-20 21:57 IST

Photo Credit : AP \ PTI

ಡಮಾಸ್ಕಸ್: ಸಿರಿಯಾ ಸೇನೆ ಹಾಗೂ ಕುರ್ದಿಶ್ ನೇತೃತ್ವದ ಬಂಡುಕೋರರ ನಡುವೆ ಉತ್ತರ ಸಿರಿಯಾದಲ್ಲಿ ನಡೆಯುತ್ತಿರುವ ಗುಂಡಿನ ಕಾಳಗದ ನಡುವೆ, ಜೈಲಿನಿಂದ ತಪ್ಪಿಸಿಕೊಂಡಿರುವ ಹತ್ತಾರು ಐಸಿಲ್ ಬಂಡುಕೋರರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು Aljazeera ವರದಿ ಮಾಡಿದೆ. 

ಹಲವು ವಾರಗಳಿಂದ ನಡೆಯುತ್ತಿರುವ ಹೋರಾಟದ ಬಳಿಕ ಕದನ ವಿರಾಮ ಸಾಧ್ಯತೆಯ ಕುರಿತು ಅನಿಶ್ಚಿತತೆ ಮುಂದುವರಿದಿರುವಾಗಲೇ, ಸಿರಿಯಾ ಡೆಮಾಕ್ರಟಿಕ್ ಫೋರ್ಸ್ (ಎಸ್‌ಡಿಎಫ್) ಹಿಡಿತದಲ್ಲಿರುವ ಸಿರಿಯಾದ ಪೂರ್ವ ಭಾಗದ ಹಸಾಕ ನಗರತ್ತ ಸರಕಾರಿ ಪಡೆಗಳು ಧಾವಿಸತೊಡಗಿವೆ.

ತೀವ್ರ ಸೇನಾ ಒತ್ತಡದ ಪರಿಣಾಮ, ಸಿರಿಯಾದ ಪ್ರಮುಖ ತೈಲ ಬಾವಿಗಳ ಮೇಲೆ ಹಲವಾರು ವರ್ಷಗಳಿಂದ ನಿಯಂತ್ರಣ ಹೊಂದಿದ್ದ ಅರಬ್ ಬಾಹುಳ್ಯ ಆಡಳಿತವಿರುವ ಎರಡು ನಗರಗಳಾದ ರಕ್ಕಾ ಹಾಗೂ ಡೈರ್ ಅಝ್ ಝೋರ್‌ನಿಂದ ಹಿಂದೆ ಸರಿಯಲು ಎಸ್‌ಡಿಎಫ್ ಸಮ್ಮತಿಸಿದೆ.

ಈ ನಡುವೆ, ಸಿರಿಯಾದ ಅಧ್ಯಕ್ಷ ಅಹ್ಮದ್ ಅಲ್-ಶರಾ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿರಿಯಾದಲ್ಲಿನ ಕ್ಷಿಪ್ರ ಬೆಳವಣಿಗೆಗಳ ಕುರಿತು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸಿರಿಯಾ ಪ್ರಾಂತ್ಯದ ಏಕತೆ ಮತ್ತು ಸ್ವಾತಂತ್ರ್ಯ ಹಾಗೂ ದೇಶದಲ್ಲಿರುವ ಕುರ್ದಿಶ್ ಜನರ ಹಕ್ಕುಗಳನ್ನು ಸಂರಕ್ಷಿಸುವ ಕುರಿತು ಇಬ್ಬರೂ ಸಮ್ಮತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News