×
Ad

ದಟ್ಟವಾದ ಹೊಗೆ ಹೊದಿಕೆಯಡಿಯಲ್ಲಿ ಕಣ್ಮರೆಯಾದ ತಾಜ್ ಮಹಲ್!

Update: 2024-11-14 12:44 IST

Photo credit: NDTV

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಮಾಲಿನ್ಯದ ಮಟ್ಟವು ಹದಗೆಟ್ಟಿದ್ದರಿಂದ ಗುರುವಾರ ಬೆಳಿಗ್ಗೆ ತಾಜ್ ಮಹಲ್ ಅನ್ನು ದಟ್ಟವಾದ ಹೊಗೆ ಆವರಿಸಿದೆ.

ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ತಾಜ್ ಮಹಲನ್ನು ದಟ್ಟವಾದ ಮಂಜು ಆವರಿಸಿರುವ ದೃಶ್ಯ ಕಂಡು ಬಂದಿದೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಅಂಕಿಅಂಶಗಳ ಪ್ರಕಾರ, ಆಗ್ರಾದಲ್ಲಿನ ವಾಯು ಗುಣಮಟ್ಟ ಸೂಚ್ಯಂಕವು 'ಮಧ್ಯಮ' ವಿಭಾಗದಲ್ಲಿ 193 ರಷ್ಟಿದೆ.

ಸೋಮವಾರದವರೆಗೂ ದಟ್ಟವಾದ ಮಂಜು ಮುಂದುವರಿಯುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News