×
Ad

ತಮಿಳುನಾಡು: ಎಐಎಡಿಎಂಕೆಯ 15 ಮಾಜಿ ಶಾಸಕರು, ಸಂಸದರು ಬಿಜೆಪಿಗೆ ಸೇರ್ಪಡೆ

Update: 2024-02-07 15:09 IST

Photo: ANI

ಹೊಸದಿಲ್ಲಿ : ತಮಿಳುನಾಡಿನ 15 ಮಾಜಿ ಶಾಸಕರು ಮತ್ತು ಮಾಜಿ ಸಂಸದರು ಸೇರಿದಂತೆ ಹಲವಾರು ನಾಯಕರು ಬುಧವಾರ ಇಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಈ ಪೈಕಿ ಹೆಚ್ಚಿನ ನಾಯಕರು ರಾಜ್ಯದಲ್ಲಿ ಬಿಜೆಪಿಯ ಮಾಜಿ ಮಿತ್ರಪಕ್ಷವಾದ ಎಐಎಡಿಎಂಕೆಗೆ ಸೇರಿದವರಾಗಿದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರಲ್ಲದೆ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಮತ್ತು ಎಲ್ ಮುರುಗನ್ ಹಾಜರಿದ್ದರು.

ಸೇರ್ಪಡೆಗೊಂಡವರನ್ನು ಸ್ವಾಗತಿಸುತ್ತಾ ಮಾತನಾಡಿದ ಅಣ್ಣಾಮಲೈ,  ಬಿಜೆಪಿಗೆ ಅನುಭವ ಸಂಪತ್ತು ಲಭಿಸಿದೆ. ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಲು ಇದು ಸಹಾಯವಾಗಲಿದೆ ಎಂದು ಹೇಳಿದರು.

ಇಲ್ಲಿ ಸಾಂಪ್ರದಾಯಿಕವಾಗಿ ಬಿಜೆಪಿ ದೊಡ್ಡ ಶಕ್ತಿಯಾಗಿಲ್ಲ.‌ ಈ ರೀತಿ ದೊಡ್ಡ ಮಟ್ಟದಲ್ಲಿ ಸೇರ್ಪಡೆಯಾಗಿರುವುದು ತಮಿಳುನಾಡಿನಂತಹ ರಾಜ್ಯದಲ್ಲಿ ಮೋದಿಯವರ ಜನಪ್ರಿಯತೆಯನ್ನು ತೋರಿಸುತ್ತದೆ. ಕಳೆದ 10 ವರ್ಷಗಳ ಪರಿವರ್ತನೆಯು ಮುಂದುವರಿಯಬೇಕೆಂದು ಭಾರತದ ಪ್ರತಿಯೊಬ್ಬ ನಾಗರಿಕನು ಬಯಸುತ್ತಾನೆ ಎಂಬುದು ಸ್ಪಷ್ಟವಾಗಿದೆ"  ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News