×
Ad

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದ ಆರೋಪಿ ಎನ್‌ಕೌಂಟರ್‌ಗೆ ಬಲಿ

Update: 2024-07-14 11:50 IST

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಕೆ.ಆರ್ಮ್‌ಸ್ಟ್ರಾಂಗ್ (Photo: indiatoday.in)

ಚೆನ್ನೈ: ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಕೆ.ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿಯನ್ನು ಶನಿವಾರ ರಾತ್ರಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಎಸ್‌ಪಿ ಮುಖ್ಯಸ್ಥ ಕೆ‌.ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಕ್ಕೆ ಗುರಿಯಾಗಿದ್ದ ರೌಡಿ ಶೀಟರ್ ತಿರುವೆಂಗಡಮ್ ಎಂಬ ಆರೋಪಿಯನ್ನು ಚೆನ್ನೈನ ಮಾದಾವರಂ ಬಳಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಿಎಸ್‌ಪಿ ಮುಖ್ಯಸ್ಥ ಕೆ‌.ಆರ್ಮ್‌ಸ್ಟ್ರಾಂಗ್‌ರ ಹತ್ಯೆಗೂ ಮುನ್ನ ಅವರ ದೈನಂದಿನ ಚಲನವಲನಗಳನ್ನು ಹಲವಾರು ದಿನಗಳಿಂದ ಗಮನಿಸಿದ್ದ ತಿರುವೆಂಗಡಂ, ನಿರಂತರವಾಗಿ ಅವರ ಮೇಲೆ ಕಣ್ಣಿಟ್ಟಿದ್ದ ಎಂದು ಹೇಳಲಾಗಿದೆ.

ಜುಲೈ 5ರಂದು ಕೆ‌.ಆರ್ಮ್‌ಸ್ಟ್ರಾಂಗ್ ಅವರನ್ನು ಭೀಕರವಾಗಿ ಇರಿದು ಹತ್ಯೆಗೈಯ್ಯಲಾಗಿತ್ತು. ಈ ಸಂಬಂಧ ಚೆನ್ನೈ ಪೊಲೀಸರು 11 ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News