×
Ad

ಮುಂಬರುವ ಲೋಕಸಭಾ ಚುನಾವಣೆ ಭಾರತದ ಪ್ರಜಾಪ್ರಭುತ್ವಕ್ಕೆ “ಮಾಡು ಇಲ್ಲವೇ ಮಡಿ” ಹೋರಾಟವಾಗಿದೆ: ಸ್ಟಾಲಿನ್‌

Update: 2024-04-06 14:52 IST

CM MK Stalin | Photo: PTI

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯು ಭಾರತದ ಪ್ರಜಾಪ್ರಭುತ್ವದ ಆಶಯವನ್ನು ರಕ್ಷಿಸುವ ಮಹತ್ವದ ಹೋರಾಟವಾಗಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಹೇಳಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ “ಮಾಡು ಇಲ್ಲವೇ ಮಡಿ” ಹೋರಾಟವಾಗಿದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದ ಅವರು, ಭಾರತದ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಬಹುತ್ವವನ್ನು ರಕ್ಷಿಸಲು ಈ ಚುನಾವಣೆ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ವಿಪಕ್ಷಗಳ ಏಕತೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಸ್ಟಾಲಿನ್‌, ಹಿರಿಯ ನಾಯಕರಾದ ಅರವಿಂದ್‌ ಕೇಜ್ರಿವಾಲ್‌, ಅಖಿಲೇಶ್‌ ಯಾದವ್‌, ಉದ್ಧವ್‌ ಠಾಕ್ರೆ, ಮಮತಾ ಬ್ಯಾನರ್ಜಿಯವರ ಉಪಸ್ಥಿತಿ ಬಲ ನೀಡಿದೆ ಎಂದರು. ಮೋದಿ ಮತ್ತು ಆರೆಸ್ಸೆಸ್‌ಗೆ ಪ್ರಬಲ ಸವಾಲೊಡ್ಡುವಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಪಾತ್ರವನ್ನೂ ಸ್ಟಾಲಿನ್‌ ಶ್ಲಾಘಿಸಿದರು.

ಅರೆಸ್ಸೆಸ್‌ ಸಿದ್ಧಾಂತ ಆಧಾರಿತ ಬಿಜೆಪಿಯ ವಿಭಜನಾತ್ಮಕ ರಾಜಕೀಯಕ್ಕೆ ವಿರುದ್ಧವಾಗಿ ತಮ್ಮ ಪಕ್ಷ ಡಿಎಂಕೆ ಸಾಮಾಜಿಕ ನ್ಯಾಯ ಮತ್ತು ಸರ್ವರನ್ನೊಳಗೊಂಡ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸ್ಟಾಲಿನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News